ಆನ್ ಲೈನ್ ಗೇಮ್ ನಲ್ಲಿ ಪರಿಚಯವಾದ ಪ್ರಿಯಕರನಿಗೆ ಹುಡುಕಿಕೊಂಡು ಭಾರತಕ್ಕೆ ಬಂದ ಮಹಿಳೆ; ಸೌದಿಯಲ್ಲಿ ಪತಿ ಕಂಗಾಲು

ನವದೆಹಲಿ; ಆನ್ ಲೈನ್ ಗೇಮಿಂಗ್ ಪಬ್ ಜಿ ಆಟದ ವೇಳೆ ಹುಟ್ಟಿಕೊಂಡ ಪ್ರೇಮದಿಂದಾಗಿ ಪಾಕ್ ನ ಮಹಿಳೆ ಭಾರತಕ್ಕೆ ಬಂದು ಪ್ರಿಯಕರನ ಜೊತೆ ವಾಸಕ್ಕೆ ಹಟ ಹಿಡಿದಿರುವುದು ಎಲ್ಲೆಡೆ ಸುದ್ದಿಯಾಗಿತ್ತು.

ಆದರೆ ಮಹಿಳೆಯ ಮೊದಲ ಪತಿ, ತನ್ನ ಪತ್ನಿಯ ಆಗಮನಕ್ಕೆ ಎದುರು ನೋಡುತ್ತಿದ್ದು ಪತ್ನಿ ವಾಪಸ್ ಬರುವಂತೆ ಮನವಿ ಮಾಡಿದ್ದಾನೆ.

ನಾನು ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅನ್ನೋದು ನಿನಗೇ ಚೆನ್ನಾಗಿ ಗೊತ್ತು. ಈಗಲೂ ಅಷ್ಟೇ ಪ್ರೀತಿ ಮಾಡ್ತೀನಿ ಸೀಮಾ, ದಯವಿಟ್ಟು ಹಿಂತಿರುಗಿ ಬಂದುಬಿಡು, ನಿನಗೆ ಏನಾದ್ರೂ ಆದ್ರೆ ಯಾರು ನೋಡಿಕೊಳ್ತಾರೆ? ವಾಪಸ್‌ ಬಂದುಬಿಡು ಎಂದು ಸೀಮಾ ಹೈದರ್‌ ಮೊದಲ ಪತಿ ಭಾವುಕರಾಗಿದ್ದಾರೆ.

ಪಬ್‌ಜಿ ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ ಮೊದಲ ಪತಿ ಗುಲಾಮ್‌ ಹೈದರ್‌ ಸೀಮಾ ಹಿಂತಿರುಗುವಂತೆ ಮನವಿ ಮಾಡಿದ್ದಾನೆ. ಜೊತೆಗೆ ಭಾರತ ಸರ್ಕಾರಕ್ಕೂ ಪತ್ನಿಯನ್ನು ಕಳುಹಿಸಿಕೊಡುವಂತೆ ಕೋರಿ ಪತ್ರ ಬರೆದಿದ್ದಾನೆ.

ಪ್ರಸ್ತುತ ಸೌದಿ ಅರೇಬಿಯಾದಲ್ಲಿರುವ ಮಹಿಳೆಯ ಪತಿ ಗುಲಾಮ್‌ ಹೈದರ್‌ ಪಾಕಿಸ್ತಾನಿ ಯುಟ್ಯೂಬರ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ನಾನು ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅನ್ನೋದು ಚೆನ್ನಾಗಿ ಗೊತ್ತು. ಈಗಲೂ ಅಷ್ಟೇ ಪ್ರೀತಿಸುತ್ತೇನೆ, ಮುಂದೆಯೂ ಪ್ರೀತಿಸುತ್ತೇನೆ, ಬಂದುಬಿಡು. ನಿನ್ನನ್ನು, ಮಕ್ಕಳನ್ನ ಕಳೆದುಕೊಳ್ಳಲು ಇಷ್ಟವಿಲ್ಲ. ನಾವು ಮತ್ತೆ ಹೊಸಜೀವನ ಶುರು ಮಾಡೋಣ ಬೇಗನೆ ಬಾ ಎಂದಿದ್ದಾನೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು