ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆ 5ರಿಂದ ನಿಷೇಧಾಜ್ಞೆ ಜಾರಿ; ಈ ವೇಳೆ ಯಾವುದಕ್ಕೆ ನಿಷೇಧವಿದೆ? ಇಲ್ಲಿದೆ ಮಾಹಿತಿ..

ಮಂಗಳೂರು;ನಾಳೆ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೇ 13ರ ಬೆಳಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ದ.ಕ ಜಿಲ್ಲಾಧಿಕಾರಿ ರವಿಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದು, ನಿಷೇಧಾಜ್ಞೆ ವೇಳೆ ಮತ ಎಣಿಕೆ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ವಿಜಯೋತ್ಸವ ಮಾಡುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಲಾಗಿದೆ.

ನಿಷೇಧಾಜ್ಞೆ ವೇಳೆ ಸಾರ್ವಜನಿಕವಾಗಿ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು,ಸಾರ್ವಜನಿಕವಾಗಿ ಆಯುಧಗಳನ್ನು ತೆಗೆದುಕೊಂಡು ಹೋಗುವುದು, ಸಾರ್ವಜನಿಕ ಸಮಾರಂಭ ಪ್ರತಿಭಟನೆಗೆ ಅವಕಾಶ ನಿರಾಕರಿಸಲಾಗಿದೆ.

ಶವ ಸಂಸ್ಕಾರ, ಮದುವೆ ಅಥವಾ ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್ 19 ಕಾರ್ಯಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.

ದ.ಕ ಜಿಲ್ಲಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಸುರತ್ಕಲ್ ನ ಎನ್‌ಐಟಿಕೆಯಲ್ಲಿ‌ ನಡೆಯಲಿದೆ.ಇದಕ್ಕೆ ಸಿದ್ಧತೆ ಪೂರ್ಣಗೊಂಡಿದೆ.

ಜಿಲ್ಲೆಯಲ್ಲಿ 1860 ಮತಗಟ್ಟೆಗಳಿದ್ದು, ಗರಿಷ್ಟ 18 ಸುತ್ತುಗಳ ಮತ ಎಣಿಕೆ ನಡೆಯಲಿದೆ. ಎಣಿಕೆಯ ಕೊಠಡಿಗಳಲ್ಲಿ ವೆಬ್‌ ಕಾಸ್ಟಿ ವ್ಯವಸ್ಥೆ ಮತ್ತು ಸಿಸಿಟಿವಿಗಳನ್ನು ಆಳವಡಿಸಲಾಗಿದೆ
ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕಾ ಕಾರ್ಯವು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಾಳೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು,  ಕಾನೂನು ಸುವ್ಯವಸ್ಥೆ ಕಾಪಾಡಲು  ಕ್ರಮವಹಿಸಲಾಗಿದೆ.

ರಾಜ್ಯದ 58,545 ಮತಗಟ್ಟೆಗಳಲ್ಲಿನ ಮತದಾರರು ಅಖಾಡದಲ್ಲಿರುವ 2615 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಫಲಿತಾಂಶ ನಾಳೆ ಪ್ರಕಟವಾಗಲಿದೆ.

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.

ಮತದಾನ ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅವರ ಕರ್ತವ್ಯಕ್ಕೆ ಅನುಗುಣವಾಗಿ ಪ್ರವೇಶ ಪತ್ರ ಅಥವಾ ಗುರುತಿನ ಚೀಟಿಗಳನ್ನು ಚುನಾವಣಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ನೀಡಿರುತ್ತಾರೆ.

ನಿಯೋಜಿತಗೊಂಡ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳು ತಮಗೆ ನೀಡಿರುವ ಪಾಸ್‍ಗಳನ್ನು ಕಡ್ಡಾಯವಾಗಿ ಧರಿಸಿರಬೇಕು. ಭದ್ರತಾ ಸಿಬ್ಬಂದಿಗಳು ಕೇಳಿದಾಗ ತಕ್ಷಣ ತೋರಿಸಬೇಕು. ಅನಾವಶ್ಯಕ ಗೊಂದಲ, ವಾದಗಳಿಗೆ ಅವಕಾಶವಿರುವುದಿಲ್ಲ. ಹಾಗೂ ಮತ ಎಣಿಕಾ ಕೇಂದ್ರಕ್ಕೆ ಬರುವವರು ನೀರಿನ ಬಾಟಲ್, ಮೊಬೈಲ್, ಕಡ್ಡಿಪೆಟ್ಟಿಗೆ, ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗಡೆ ತರದಂತೆ ನಿಷೇಧಿಸಲಾಗಿದೆ.ಪ್ರತಿಯೊಬ್ಬರು ಚುನಾವಣಾ ಆಯೋಗದ ನಿಯಮಾವಳಿಗಳನ್ನು ಪಾಲಿಸಬೇಕಿದೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com