ಮಾಧ್ಯಮ ಸದಾ ನಿಮ್ಮ ಗುಲಾಮರಾಗಿಯೇ ಕಾರ್ಯನಿರ್ವಾಹಿಸಬೇಕೆ? ವಾರ್ತಾಭಾರತಿ ಯೂಟ್ಯೂಬ್ ಚಾನಲ್ ಗೆ ನಿರ್ಬಂಧ ವಿಧಿಸಿದ ಕ್ರಮವನ್ನು ಪ್ರಶ್ನಿಸಿದ SDPI ಮಾದ್ಯಮ ಉಸ್ತುವಾರಿ ರಿಯಾಝ್ ಕಡಂಬು

ಬೆಂಗಳೂರು;ಗಣರಾಜ್ಯೋತ್ಸವದ ಪರೇಡ್ ಪ್ರಸಾರ ಮಾಡಿದ ಕಾರಣಕ್ಕೆ ವಾರ್ತಾಭಾರತಿಯ ಯೂಟ್ಯೂಬ್ ಚಾನೆಲ್ ನಿಷೇಧ ಮಾಡಿದ ಕ್ರಮವನ್ನು ಎಸ್ ಡಿಪಿಐ ರಾಜ್ಯ ಮಾದ್ಯಮ ಉಸ್ತುವಾರಿ ರಿಯಾಝ್ ಕಡಂಬು ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಿಯಾಝ್ ಕಡಂಬು, ಪ್ರಧಾನಿಗಳೇ ಗಣರಾಜ್ಯೋತ್ಸವದ ಪರೇಡ್ ಪ್ರಸಾರ ಮಾಡುವುದೂ ಅಪರಾಧವೆ? ಒಂದೆಡೆ ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಲೇ ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಮಾಡಿದಿರಿ,ಈಗ ವಾರ್ತಾಭಾರತಿಯ ಯೂಟ್ಯೂಬ್ ಚಾನೆಲ್ ನಿಷೇಧ ಮಾಡಿದ್ದೀರಿ, ಅದೂ ಗಣರಾಜ್ಯ ಪರೇಡ್ ಪ್ರಸಾರ ಮಾಡಿದ ಕಾರಣಕ್ಕೆ. ಮಾಧ್ಯಮ ಸದಾ ನಿಮ್ಮ ಗುಲಾಮರಾಗಿಯೇ ಕಾರ್ಯನಿರ್ವಾಹಿಸಬೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ವಾರ್ತಾಭಾರತಿಯ ಯೂಟ್ಯೂಬ್ ಚಾನಲ್ ಗೆ ಯೂಟ್ಯೂಬ್ ಗುರುವಾರ ಒಂದು ವಾರದ ನಿರ್ಬಂಧ ವಿಧಿಸಿತ್ತು.ವಾರ್ತಾಭಾರತಿಯ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾದ ದಿಲ್ಲಿಯ ಕರ್ತವ್ಯ ಪಥ್ ನಲ್ಲಿ ನಡೆದ ದೇಶದ 74ನೇ ಗಣರಾಜ್ಯೋತ್ಸವ ಪರೇಡ್ ನ ನೇರಪ್ರಸಾರದಲ್ಲಿ ಕಾಪಿರೈಟ್ ಇರುವ ವಿಷಯಗಳು ಪ್ರಸಾರವಾಗಿವೆ ಎಂದು ಯೂಟ್ಯೂಬ್ ಕಾರಣ ಹೇಳಿತ್ತು.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com