ಮಂಗಳೂರು: Isupport sdpi ಎಂಬ ಹೆಸರಿನಲ್ಲಿರುವ ನಕಲಿ ಫೇಸ್‌ಬುಕ್ ಪೇಜ್ ಅಡ್ಮಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಡಿಪಿಐ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದೆ.
ಕಿಡಿಗೇಡಿಗಳು ಪಕ್ಷದ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಪೇಜ್ ರಚಿಸಿ ಅದರಲ್ಲಿ ಪಕ್ಷದ ಕೆಲವು ಕಾರ್ಯಚಟುವಟಿಕೆಗಳ ಹಾಗೂ ಅಶ್ಲೀಲ ವೀಡಿಯೋಗಳನ್ನು ನಿರಂತರವಾಗಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಮಾಜದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟು ಮಾಡುವ ಉದ್ದೇಶದಿಂದ ಈ ಕೆಲಸವನ್ನು ಮಾಡುತ್ತಿದ್ದು, ದುಷ್ಕೃತ್ಯದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳೂರು ನಗರ ಪೊಲೀಸ್ ಉಪಾ ಆಯುಕ್ತರನ್ಹು ಜಿಲ್ಲಾ ನಿಯೋಗವು ಭೇಟಿಯಾಗಿದೆ.