ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆ; SDPI ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು:ವಿಧಾನಸಭಾ ಚುನಾವಣೆ ಹಿನ್ನೆಲೆ ಎಸ್ ಡಿಪಿಐ ತನ್ನ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್’ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಮ್.ಕೆ ಪೈಝಿ ಅವರು, ಎಸ್’ಡಿಪಿಐ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ನರಸಿಂಹರಾಜ – ಅಬ್ದುಲ್ ಮಜೀದ್ ಮೈಸೂರು, ಪುಲಕೇಶಿ ನಗರ – ಬಿ.ಆರ್ ಭಾಸ್ಕರ್ ಪ್ರಸಾದ್, ಸರ್ವಜ್ಞ ನಗರ– ಅಬ್ದುಲ್ ಹನ್ನಾನ್,ಬಂಟ್ವಾಳ – ಇಲ್ಯಾಸ್ ಮಹಮ್ಮದ್ ತುಂಬೆ, ಮೂಡಬಿದಿರೆ– ಅಲ್ಫೋನ್ಸೋ ಫ್ರಾಂಕೋ, ಬೆಳ್ತಂಗಡಿ– ಅಕ್ಬರ್ ಬೆಳ್ತಂಗಡಿ, ಕಾಪು– ಹನೀಫ್ ಮುಳೂರು,ದಾವಣಗೆರೆ ದಕ್ಷಿಣ (ದಾವಣಗೆರೆ) – ಇಸ್ಮಾಯಿಲ್ ಝಬೀವುಲ್ಲಾ, ಚಿತ್ರದುರ್ಗ – ಬಾಳೆಕಾಯಿ ಶ್ರೀನಿವಾಸ್, ವಿಜಯನಗರ – ನಝೀರ್ ಖಾನ್ ಸ್ಪರ್ಧೆ ಮಾಡಲಿದ್ದಾರೆ‌.

ಇನ್ನು ರಾಯಚೂರು ನಗರ, ಚಾಮರಾಜನಗರ, ಮಂಗಳೂರು(ಉಳ್ಳಾಲ), ಪುತ್ತೂರು, ಮಡಿಕೇರಿ, ವಿರಾಜಪೇಟೆ, ಕೋಲಾರ, ಹಾವೇರಿ, ಮಂಡ್ಯ ನಗರ, ತುಮಕೂರು ನಗರ, ಶಿರಾ, ಭಟ್ಕಳ, ಶಿರಸಿ, ಶಹಾಪುರ,ಯಾದಗಿರಿ ನಗರ, ಶಿವಾಜಿನಗರ, ಹೆಬ್ಬಾಳ, ಶಾಂತಿನಗರ, ಬ್ಯಾಟರಾಯನಪುರ, ಹೊಸಕೋಟೆ, ಹುಬ್ಬಳ್ಳಿ ಪಶ್ಚಿಮ, ಚಾಮರಾಜನಗರ,ಹುಣಸೂರು, ಮುಳಬಾಗಿಲು, ರಾಮನಗರ, ಹಾಸನ, ಸಕಲೇಶಪುರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮಾಂತರ, ಶಿವಮೊಗ್ಗ ನಗರ, ತೇರದಾಳ, ವಿಜಯಪುರ, ಮಂಗಳೂರು ಉತ್ತರ(ಸುರತ್ಕಲ್), ಚನ್ನಗಿರಿ, ಹಿರಿಯೂರು, ಭದ್ರಾವತಿ, ಬಾಗಲಕೋಟೆ ನಗರ, ದೇವದುರ್ಗ(ರಾಯಚೂರು)ನಲ್ಲಿ ಎಸ್ ಡಿಪಿಐ ಸ್ಪರ್ಧೆ ಮಾಡಲಿದೆ ಎಂದು ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.

ಟಾಪ್ ನ್ಯೂಸ್