ಬಂಟ್ವಾಳ;ಬಂಟ್ವಾಳ ತಾಲೂಕಿನ SDPI ಮಂಚಿ ಗ್ರಾಮ ಸಮಿತಿ ಹಾಗೂ KMC ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಕುಕ್ಕಾಜೆ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸಲಾಯಿತು.
ಈ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು SDPI ಮಂಚಿ ಗ್ರಾಮ ಸಮಿತಿ ಅಧ್ಯಕ್ಷ ಕಬೀರ್ ಮಂಚಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ನೆರವೇರಿಸಿದರು.
ಸಭೆಯನ್ನು ಉದ್ದೇಶಿಸಿ ವಂದನೇಯ ಹೆನ್ರಿ ಡಿ ಸೋಜ SFX ಧರ್ಮ ಗುರುಗಳು ನಿತ್ಯಾದರ್ ಚರ್ಚ್ ಸಾಲೆತ್ತೂರು, ಮೂನಿಷ್ ಅಲಿ ಬಂಟ್ವಾಳ ಅಧ್ಯಕ್ಷರು SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ , MD ಮಾಹಿಲ ಮಂಚಿ ಸಹ ಪ್ರಾಧ್ಯಾಪಕರು ಮೆಲ್ಕರ್ ವುಮನ್ಸ್ ಕಾಲೇಜು ಹಾಗೂ SDPI ಮಂಗಳೂರು ವಿಧಾನಸಭಾ ಸಂಘಟನಾ ಕಾರ್ಯದರ್ಶಿ ಅಶ್ರಫ್ ಮಂಚಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಲಂದರ್ ಪರ್ತಿಪಾಡಿ, ಮಾಕ್ಸಿಂ ಫೆರ್ನಾಂಡಿಸ್, ಬಶೀರ್ ಕೊಲ್ನಾಡು, ನವಾಜ್ ಕೋಡಿಬೈಲು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ SDPI ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ರಕ್ತದಾನ ಶಿಬಿರದಲ್ಲಿ ಸುಮಾರು 68 ಯುನಿಟ್ ರಕ್ತ ಸಂಗ್ರಹವಾಹಿತು DN ಫಾರೂಕ್ ಮಂಚಿ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.