ಚಾಮರಾಜಪೇಟೆ;11 ವರ್ಷದ ಬಾಲಕಿ ತನ್ನನ್ನು ಶಾಪಿಂಗ್ ಗೆ ಹೋಗುವಾಗ ಮನೆಯವರು ಬಿಟ್ಟು ಹೋದರೆಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆಯಿಂದ ವರದಿಯಾಗಿದೆ.
ಐದನೇ ತರಗತಿ ಓದುತ್ತಿದ್ದ ವೈಶಾಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಹೆತ್ತವರು ತನ್ನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿಲ್ಲ ಎಂಬ ಕಾರಣಕ್ಕೆ ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಐದನೇ ತರಗತಿ ಓದುತ್ತಿದ್ದ ವೈಶಾಲಿಗೆ ಕೆಲವು ದಿನಗಳ ಹಿಂದಷ್ಟೇ ಹೆತ್ತವರು ಹೊಸ ಡ್ರಸ್ ನ್ನು ಕೊಡಿಸಿದ್ದರು. ಇದರಿಂದಾಗಿ ಮತ್ತೊಮ್ಮೆ ಹೊಸ ಬಟ್ಟೆ ಬೇಡ ಎಂದು ವೈಶಾಲಿಯನ್ನು ಮನೆಯಲ್ಲೆ ಬಿಟ್ಟು ಇನ್ನು ಇಬ್ಬರು ಮಕ್ಕಳನ್ನು ವೈಶಾಲಿ ಪೋಷಕರು ಕರೆದುಕೊಂಡು ಶಾಪಿಂಗ್‌ಗೆ ಹೋಗಿದ್ದರು.ಇದರಿಂದ ಮನನೊಂದಿದ್ದ ವೈಶಾಲಿ,
ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹೆತ್ತವರು ಶಾಪಿಂಗ್ ಮುಗಿಸಿ ಬಂದು ಕಿಟಕಿ ಮೂಲಕ ನೋಡಿದಾಗ ಬಾಲಕಿ ನೇಣುಬಿಗಿದುಕೊಂಡಿರುವುದು ತಿಳಿದು ಬಂದಿದೆ.ತಕ್ಷಣವೇ ಬಾಗಿಲು ತೆರೆದು ನೋಡಿದರೆ ವೈಶಾಲಿ ಸಾವನ್ನಪ್ಪಿದ್ದಳು.
ಈ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.