ಶಾಲೆಯಲ್ಲೇ ಸಹಪಾಠಿ ಬಾಲಕಿಗೆ ತಾಳಿ ಕಟ್ಟಿದ ಬಾಲಕ;ವಿಡಿಯೋ ವೈರಲ್

ವಿವಾಹ, ತಾಳಿ ಕಟ್ಟುವುದು ಎನ್ನುವುದು ಸಾಂಪ್ರದಾಯಿಕ ಭಾರತದಲ್ಲಿ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ.ಆದರೆ
ಇತ್ತೀಚಿನ ದಿನಗಳಲ್ಲಿ ಮದುವೆ ಕೂಡಾ ಒಂದು ರೀತಿಯ ಆಟವೇ ಆಗಿದೆ.

ಪ್ರೀತಿ-ಪ್ರೇಮ ವಿಚಾರದಲ್ಲಿ ಶಾಲಾ ಮಕ್ಕಳು ಕೂಡ ಇದನ್ನು ಆಟವಾಗಿಯೆ ಪರಿಗಣಿಸುತ್ತಾರೆ.ಹೌದು ಇದಕ್ಕೆ ಪುಷ್ಠಿ ನೀಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ವೈರಲ್ ವಿಡಿಯೋ ನೋಡಿದರೆ ಶಾಲೆಗೆ ಹೋಗುವ ಮಕ್ಕಳು ದಾರಿ ಮಧ್ಯೆ ತಾಳಿ ಕಟ್ಟಿಕೊಳ್ಳುವ ಹಂತಕ್ಕೆ ಬಂದಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ.

ವಿಡಿಯೋದಲ್ಲಿ ಶಾಲಾ ಹುಡುಗ ಹುಡುಗಿಯ ಕುತ್ತಿಗೆಗೆ ತಾಳಿ ಕಟ್ಟುತ್ತಿದ್ದಂತೆ ಅಲ್ಲಿ ಇರುವ ಮಕ್ಕಳು ಇಬ್ಬರ ಮೇಲೆ ಹೂವನ್ನು ಹಾಕುವುದನ್ನು ಕೂಡಾ ಕಾಣಬಹುದು.

ಫಂಟಾಪ್ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com