ಸೌದಿ ಪ್ರಯಾಣಿಕರಿಗೆ ಬಹುಮುಖ್ಯ ಮಾಹಿತಿ; ಸೌದಿಗೆ ಉದ್ಯೋಗಕ್ಕೆ ತೆರಳಲು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯ!
ನವದೆಹಲಿ:ಸೌದಿ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ ಇದಾಗಿದ್ದು ಸೌದಿ ಪ್ರಯಾಣಕ್ಕೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ.ಪರಿಷ್ಕೃತ ಅಧಿಸೂಚನೆ ಇಂದಿನಿಂದಲೇ ಜಾರಿಗೆ ಬರಲಿದೆ.
ಭಾರತದಲ್ಲಿನ ಸೌದಿ ಅರೇಬಿಯಾದ ರಾಯಭಾರ ಕಚೇರಿ ಈ ಕುರಿತು ಮಾಹಿತಿ ನೀಡಿದ್ದು,ಅಪರಾಧ ಪ್ರಕರಣಗಳಲ್ಲಿ ಇರುವ ಆರೋಪಿಗಳು ಇನ್ನು ಸೌದಿಗೆ ತೆರಳುವಾಗ ಸಮಸ್ಯೆ ಎದುರಾಗಲಿದೆ ಎಂದು ತಿಳಿಸಿದೆ.
ಮುಂಬೈನಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್
ಉದ್ಯೋಗ ವೀಸಾ ಅನುಮೋದನೆಗಾಗಿ ಮೊದಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಒದಗಿಸುವಂತೆ ಸೂಚಿಸಿದೆ.
ಈ ಕಾನೂನು ಪಾಲಿಸುವ ಉದ್ಯೋಗಿಗಳಿಗೆ ಮಾತ್ರ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಲು ಅನುಮತಿ ನೀಡಲು ಈ ನಿಯಮ ಜಾರಿಗೆ ತರಲಾಗಿದೆ ಎಂದು ತಿಳಿದು ಬಂದಿದೆ.