ಉಮ್ರಾ ನಿರ್ವಹಿಸಿ ಮೆಕ್ಕಾದಿಂದ ಹಿಂದಿರುಗುವಾಗ ಭೀಕರ ಅಪಘಾತ; ಸೌದಿ ಮಸೀದಿಯ ಇಮಾಂ ಸೇರಿ 7 ಮಂದಿ ಕುಟುಂಬಸ್ಥರು ಮೃತ್ಯು

ಸೌದಿಅರೇಬಿಯಾ:ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸೌದಿ ಮಸೀದಿಯ ಇಮಾಮ್, ಅವರ ಪತ್ನಿ ಮತ್ತು ಅವರ ಐವರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಇಮಾಮ್ ಶೇಖ್ ಅಹ್ಮದ್ ಅಲ್ ಬಸಿಸಿ ಸೇರಿ ಅವರ ಕುಟುಂಬದ 7 ಮಂದಿ ಮೃತಪಟ್ಟಿದ್ದಾರೆ.

ಇವರು ಪವಿತ್ರ ಉಮ್ರಾ ನಿರ್ವಹಿಸಿ ಮಕ್ಕಾದಿಂದ ಹಿಂತಿರುಗುತ್ತಿದ್ದಾಗ ಸೌದಿಯ ಕರಾವಳಿ ನಗರವಾದ ಅಲ್ ಕುನ್‌ಫುದಾ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್ ಕಾರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಗ್ರ್ಯಾಂಡ್ ಮಸೀದಿಯಲ್ಲಿ ಇಮಾಮ್ ಮತ್ತು ಕುಟುಂಬವನ್ನು ದಫನ ಕಾರ್ಯ ನಡೆದಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್