ಸೌದಿ ಅರೇಬಿಯಾ, ಕತರ್ ನಲ್ಲಿ ಚಂದ್ರದರ್ಶನ; ಶುಕ್ರವಾರ ಈದ್- ಉಲ್ ಫಿತರ್ ಆಚರಣೆಗೆ ಕರೆ

ರಿಯಾದ್: ಚಂದ್ರ ದರ್ಶನವಾದ ಹಿನ್ನೆಲೆ ಸೌದಿ ಅರೇಬಿಯಾ ಈದ್ ಅಲ್ ಫಿತರ್‌ ನ್ನು ಏಪ್ರಿಲ್ 21ರ ಶುಕ್ರವಾರ ಆಚರಿಸಲು ಅಧಿಕೃತ ದೃಢೀಕರಣವನ್ನು ನೀಡಿದೆ.

ಏಪ್ರಿಲ್ 20 ರಂಜಾನ್ ತಿಂಗಳ ಕೊನೆಯ ದಿನವಾಗಿದೆ ಮತ್ತು ಶುಕ್ರವಾರದಿಂದ ಈದ್ ಅಲ್ ಫಿತ್ರ್ ಅನ್ನು ಆಚರಿಸಲಾಗುವುದು ಎಂದು ರಾಜ್ಯದಲ್ಲಿರುವ ಚಂದ್ರ ವೀಕ್ಷಣೆ ಸಮಿತಿ ಗುರುವಾರ ಘೋಷಿಸಿತು.

ದೋಹಾ: ಈದ್ ಅಲ್ ಫಿತ್ರ್ ಅನ್ನು ಶುಕ್ರವಾರ, ಏಪ್ರಿಲ್ 21 ರಂದು ಚಂದ್ರನ ದರ್ಶನದ ಕಾರಣ ಆಚರಿಸಲಾಗುವುದು ಎಂದು ಕತಾರ್ ಅಧಿಕೃತವಾಗಿ ಘೋಷಿಸಿದೆ.

ಶುಕ್ರವಾರ ಶವ್ವಾಲ್ ಆರಂಭವಾಗಲಿದೆ ಎಂದು ಸೌದಿ ಅರೇಬಿಯಾ ಕೂಡ ಘೋಷಿಸಿದೆ ಎಂದು ಗಲ್ಪ್ ನ್ಯೂಸ್ ವರದಿ ಮಾಡಿದೆ.

ಟಾಪ್ ನ್ಯೂಸ್