-ಸರ್ಫರಾಝ್(16) ಮೃತ ವಿದ್ಯಾರ್ಥಿ.
ಹೈದರಾಬಾದ್;ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ವೀಡಿಯೋ ಚಿತ್ರೀಕರಣ ಮಾಡುವಾಗ ರೈಲು ಢಿಕ್ಕಿ ಹೊಡೆದು ಯುವಕ ಮೃತಪಟ್ಟ ಘಟನೆ ಸನತ್ ನಗರ್ ಎಂಬಲ್ಲಿ ನಡೆದಿದೆ.
ಒಂಬತ್ತನೇ ತರಗತಿ ವಿದ್ಯಾರ್ಥಿ ಸರ್ಫರಾಝ್(16) ಮೃತ ವಿದ್ಯಾರ್ಥಿ.
ರೈಲ್ವೆ ಹಳಿಯಲ್ಲಿ ನಿಂತು ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಸರ್ಫರಾಝ್ ಗೆ ರೈಲು ಢಿಕ್ಕಿ ಹೊಡೆದಿದೆ.ಸರ್ಫರಾಝ್ ರೈಲು ಹಳಿಯ ಬಳಿ ನಿಂತಿದ್ದ. ಆತನ ಸ್ನೇಹಿತರು ಸ್ವಲ್ಪ ದೂರದಲ್ಲಿ ನಿಂತು ವೀಡಿಯೋ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ರೈಲು ಹತ್ತಿರ ಬರುತ್ತಿದ್ದಂತೆ ಸ್ನೇಹಿತರು ದೂರಕ್ಕೆ ಓಡಿದ್ದಾರೆ. ಆದರೆ ರೈಲು ಸರ್ಫರಾಝ್‌ಗೆ ರೈಲು ಢಿಕ್ಕಿ ಹೊಡೆದಿತ್ತು ಹಾಗೂ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದ ಎಂದು ವರದಿಯಾಗಿದೆ.
ಸರ್ಫರಾಝ್ ಸ್ನೇಹಿತರಾದ ಮುಝಮ್ಮಿಲ್ ಮತ್ತು ಸೊಹೈಲ್ ಈ ಮಾಹಿತಿ ಮನೆಯವರಿಗೆ ತಿಳಿಸಿದ್ದರು.ಬಾಲಕನ ತಂದೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಸರ್ಫರಾಝ್ ಬಿದ್ದಿದ್ದ.
ಸ್ಥಳದಿಂದ ಬಾಲಕನ ಮೊಬೈಲ್ ಫೋನ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.