ಸ್ಯಾಂಟ್ರೋ ರವಿಯ ಅಸಲಿ ಮುಖವಾಡ ಬಯಲಾಗಿದ್ದು ಈ ಒಂದು ಕಾರಣಕ್ಕೆ!

ಬೆಂಗಳೂರು;ಸ್ಯಾಂಟ್ರೋ ರವಿ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ ಬಳಿಕ ಮೈಸೂರು ಪೊಲೀಸರು ಕೊನೆಗೂ ಗುಜರಾತಿನಲ್ಲಿ ಆತನಿಗೆ ಬಂಧಿಸಿದ್ದಾರೆ.

ಅಷ್ಟಕ್ಕು ಈ ಸ್ಯಾಂಟ್ರೋ ರವಿಯ ಪುರಾಣ ಬಯಲಾಗಿದ್ದು ಹೇಗೆ ಗೊತ್ತಾ? ಹೌದು ತೆರೆಯ ಹಿಂದೆ ನಿಂತು ಸದ್ದಿಲ್ಲದೆ ವೇಶ್ಯವಾಟಿಕೆ, ವರ್ಗಾವಣೆ ದಂಧೆ ಮೂಲಕ ಖಜಾನೆ ತುಂಬಿಸಿಕೊಳ್ಳುತ್ತಿದ್ದ ಸ್ಯಾಂಟ್ರೋ ರವಿಯ ಪುರಾಣ ಬಯಲು ಮಾಡಿದ್ದು ಆತನ ಪತ್ನಿಯೇ ಆಗಿದ್ದಾಳೆ.

ಮಂಡ್ಯ ಜಿಲ್ಲೆಯವನಾದ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ನಿವೃತ್ತ ಅಬಕಾರಿ ಅಧಿಕಾರಿಯ ಪುತ್ರ.

ಈತನ ಮೇಲೆ ಈ ಮೊದಲು ಕೂಡ ಹಲವು ಕೇಸ್ ದಾಖಲಾಗಿತ್ತು.ಅದರೆ ಮೂರು ತಿಂಗಳ ಹಿಂದೆ ಈತ ತನ್ನ ಪತ್ನಿಗೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಜೊತೆ ಮಲಗುವಂತೆ ಸೂಚಿಸಿದ್ದಾನೆ. ಆದರೆ ಇದಕ್ಕೆ ಒಪ್ಪದೆ ಈತನ ಪತ್ನಿ ಮನೆಯಿಂದ ಹೋಗಿದ್ದು,ಈ ವೇಳೆ ರವಿಯ ಲ್ಯಾಪ್ ಟಾಪ್ ಕೂಡ ಕೊಂಡೊಯ್ದಿದ್ದರು.ಇದರಲ್ಲಿ ಆತನ ಎಲ್ಲ ಕೃತ್ಯಗಳು ದಾಖಲಾಗಿತ್ತು. ಇದು ಎಲ್ಲಿ ಬಯಲಾಗುತ್ತದೋ ಎಂಬ ಭಯದಿಂದ ತನ್ನ ಪತ್ನಿಯ ವಿರುದ್ಧವೇ ದೂರು ನೀಡಿ ಜೈಲಿಗೆ ಹಾಕಿಸಿದ್ದ.

ಇದರಿಂದ ಕೋಪಗೊಂಡ ಸ್ಯಾಂಟ್ರೋ ರವಿಯ ಪತ್ನಿ ಆತನ ಜಾತಕವನ್ನು ಬಯಲು ಮಾಡಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್