ತಂದೆ ಸೇರಿ ಇಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಮಗ; ಭಯಾನಕ ಘಟನೆ ವರದಿ

ಚಿಕ್ಕಮಗಳೂರು;ವ್ಯಕ್ತಿಯೋರ್ವ ತಂದೆ ಸೇರಿ ಇಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಧುಗುಂಡಿ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ಮಧುಗುಂಡಿ ಗ್ರಾಮದ ನಿವಾಸಿ ಕಾರ್ತಿಕ್(45) ಹಾಗೂ ಭಾಸ್ಕರ್ ಗೌಡ (65) ಹತ್ಯೆಗೀಡಾದವರು ಎಂದು ತಿಳಿದು ಬಂದಿದೆ.

ಸಂತೋಷ್ (35) ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ಆರೋಪಿಯ ತಾಯಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮಧುಗುಂಡಿ ಗ್ರಾಮದ ನಿವಾಸಿ ಭಾಸ್ಕರ್‍ಗೌಡ ಅವರು ತಮ್ಮ ಜಮೀನನ್ನು ಮಾರಾಟ ಮಾಡಲು ಮುಂದಾಗಿದ್ದರು. ಇದಕ್ಕೆ ಮಧುಗುಂಡಿ ಗ್ರಾಮದ ಕಾರ್ತಿಕ್ ಎಂಬವರು ಮಧ್ಯಸ್ತಿಕೆ ವಹಿಸಿ ಬೆಂಗಳೂರು ಮೂಲದವರಿಗೆ ಜಮೀನನ್ನು ಮಾರಾಟ ಮಾಡಿಸಿದ್ದರು.ಜಮೀನು ಕೊಂಡವರು ಭಾಸ್ಕರ್ ಗೌಡ ಅವರಿಗೆ ಮುಂಗಡವಾಗಿ 12ಲಕ್ಷ ರೂ.ನೀಡಿದ್ದರು. ರವಿವಾರ ರಾತ್ರಿ ಈ ಹಣದ ವಿಚಾರವಾಗಿ ಭಾಸ್ಕರ್ ಗೌಡ ಅವರ ಮನೆಯಲ್ಲಿ ಮಧ್ಯವರ್ತಿ ಕಾರ್ತಿಕ್, ಆರೋಪಿ ಸಂತೋಷ್ ಹಾಗೂ ಆತನ ತಂದೆ, ತಾಯಿ ಮಾತುಕತೆ ನಡೆಸುತ್ತಿದ್ದ ವೇಳೆ 12 ಲಕ್ಷ ಹಣದ ಬಗ್ಗೆ ಸಂತೋಷ್ ಪ್ರಶ್ನಿಸಿದ್ದಾನೆ.ಎರಡನೇ ಮಗ ಶಿವಕುಮಾರ್ ಬಳಿ ನೀಡಿರುವುದಾಗಿ ಕಾರ್ತಿಕ್ ಹೇಳಿದ್ದಾನೆ ಎನ್ನಲಾಗಿದೆ.

ಇದರಿಂದ ಕೋಪಗೊಂಡ ಸಂತೋಷ್, ಮಧ್ಯವರ್ತಿ‌ ಮತ್ತು ತನ್ನ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ.

ಟಾಪ್ ನ್ಯೂಸ್