ಸಂಸ್ಕೃತ ಪರೀಕ್ಷೆಯಲ್ಲಿ 14,000 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನಿಯಾದ ಮೊಹಮ್ಮದ್ ಇರ್ಫಾನ್; ನಮ್ಮ ಮಗ ಶಾಸ್ತ್ರಿ, ಆಚಾರ್ಯ ಪದವಿ ಪಡೆಯಬೇಕೆಂದು ಇಚ್ಛೆ ವ್ಯಕ್ತಪಡಿಸಿದ ಪೋಷಕರು!

ಸಂಸ್ಕೃತ ಪರೀಕ್ಷೆಯಲ್ಲಿ 14,000 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನಿಯಾದ ಮೊಹಮ್ಮದ್ ಇರ್ಫಾನ್; ನಮ್ಮ ಮಗ ಶಾಸ್ತ್ರಿ, ಆಚಾರ್ಯ ಪದವಿ ಪಡೆಯಬೇಕೆಂದು ಇಚ್ಛೆ ವ್ಯಕ್ತಪಡಿಸಿದ ಪೋಷಕರು!

ಲಖನೌ:ಉತ್ತರಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಾ ಪರಿಷತ್ ಮಂಡಳಿಯ ಉತ್ತರ ಮಾಧ್ಯಮ-II (12 ನೇ ತರಗತಿ) ಪರೀಕ್ಷೆಯಲ್ಲಿ ಯುಪಿಯ ಚಂದೌಲಿಯ ಕೃಷಿ ಕಾರ್ಮಿಕರ ಮಗನಾದ ಮೊಹಮ್ಮದ್ ಇರ್ಫಾನ್ 82.7% ಅಂಕಗಳನ್ನು ಗಳಿಸಿ ಸುಮಾರು 14,000 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದ್ದಾರೆ.

ಮಂಡಳಿಯು ಇತರ ವಿಷಯಗಳೊಂದಿಗೆ ಸಂಸ್ಕೃತ ಭಾಷೆ ಮತ್ತು ಸಾಹಿತ್ಯವನ್ನು ಎರಡು ಕಡ್ಡಾಯ ವಿಷಯಗಳಾಗಿ ಮಾಡಿದೆ.

ಸಂಸ್ಕೃತ ಅಧ್ಯಾಪಕನಾಗುವ ಕನಸು ಹೊತ್ತಿರುವ ಇರ್ಫಾನ್ (17) 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಟಾಪ್ ಅಂಕಗಳಿಸಿದವರಲ್ಲಿ ಒಬ್ಬನೇ ಮುಸ್ಲಿಂ‌ ವಿದ್ಯಾರ್ಥಿಯಾಗಿದ್ದಾನೆ.

ಈ ಬಗ್ಗೆ ಇರ್ಫಾನ್ ತಂದೆ ಸಲಾವುದ್ದೀನ್ ಮಾತನಾಡಿ, ಇರ್ಫಾನ್ ಅವರನ್ನು ಸಂಪೂರ್ಣಾನಂದ ಸಂಸ್ಕೃತ ಸರ್ಕಾರಿ ಶಾಲೆಗೆ ಸೇರಿಸಿದೆ‌. ನಾನು ದಿನಗೂಲಿ 300 ರೂ. ಗಳಿಸುವ ಕೃಷಿ ಕಾರ್ಮಿಕನಾಗಿದ್ದು, ಪ್ರತಿ ತಿಂಗಳು ಕೆಲವು ದಿನಗಳವರೆಗೆ ಕೆಲಸ ಮಾಡುತ್ತಿದ್ದೇನೆ. ಇರ್ಫಾನ್‌ನನ್ನು ಖಾಸಗಿ ಅಥವಾ ಬೇರೆ ಯಾವುದೇ ಶಾಲೆಗೆ ಕಳುಹಿಸಲು ನನಗೆ ಸಾಧ್ಯವಾಗಲಿಲ್ಲ.‌ಇದೀಗ ಸಂಸ್ಖೃತ ಶಾಲೆಗೆ ಸೇರಿಸಿರುವುದು ಸಂತಸ ತಂದಿದೆ ಎಂದು ಜಿಂದಾಸ್‌ಪುರ ಗ್ರಾಮದ ನಿವಾಸಿ ಸಲಾವುದ್ದೀನ್ ಹೇಳಿದರು.

ಇರ್ಫಾನ್ ಯಾವಾಗಲೂ ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದ ಮತ್ತು ಶಾಲೆಗೆ ದಾಖಲಾದ ದಿನದಿಂದಲೇ ಸಂಸ್ಕೃತ ಕಲಿಕೆಯ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ.
ಆತನೀಗ ಶಾಸ್ತ್ರಿ (ಬಿಎ ಪದವಿಗೆ ಸಮಾನಾಂತರ) ಹಾಗೂ ಆಚಾರ್ಯ (ಎಂಎ ಪದವಿಗೆ ಸಮಾನಾಂತರ) ವ್ಯಾಸಂಗ ಮಾಡಲು ಉದ್ದೇಶಿಸಿದ್ದು, ಅವು ಪೂರ್ಣಗೊಂಡ ನಂತರ ಸಂಸ್ಕೃತ ಶಿಕ್ಷಕನಾಗಿ ಉದ್ಯೋಗ ಮಾಡುವ ಹಂಬಲ ಹೊಂದಿದ್ದಾನೆ ಎಂದು ಸಲಾಲುದ್ದೀನ್ ತಿಳಿಸಿದ್ದಾರೆ.

ಜನರು ಒಂದು ಭಾಷೆಯನ್ನು ಧರ್ಮದೊಂದಿಗೆ ಏಕೆ ಸಂಪರ್ಕಿಸುತ್ತಾರೆಂದು ನನಗೆ ತಿಳಿದಿಲ್ಲ. ಒಬ್ಬ ಹಿಂದೂ ಉರ್ದು ಕಲಿಯಲು ಮತ್ತು ಮುಸ್ಲಿಮರು ಸಂಸ್ಕೃತದಲ್ಲಿ ಉತ್ತಮ ಸಾಧನೆ ಮಾಡಬಹುದು” ಎಂದು ಅವರು ಹೇಳಿದರು. ಇರ್ಫಾನ್ ಅವರ ಕನಸನ್ನು ನನಸು ಮಾಡುವುದನ್ನು ಕುಟುಂಬವು ತಡೆಯುವುದಿಲ್ಲ ಎಂದು ಸಲಾವುದ್ದೀನ್ ಹೇಳಿದ್ದಾರೆ. ಜೂನಿಯರ್ ತರಗತಿಗಳಲ್ಲಿ ಸಂಸ್ಕೃತ ಕಡ್ಡಾಯ ವಿಷಯವಾಗಿತ್ತು ಇದು ಸಾಧನೆಗೆ ಸಹಾಯ‌ ಮಾಡಿದೆ ಎಂದು ಹೇಳಿದರು.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com