ಇಸ್ರೋದಲ್ಲಿ ಉದ್ಯೋಗ ಪಡೆದುಕೊಂಡ ಬಸ್ ಡ್ರೈವರ್ ಮಗಳು ಸನಾ

ಭೋಪಾಲ್:ಮಧ್ಯಪ್ರದೇಶದ ಬಸ್​ ಚಾಲಕನ ಮಗಳು ಸನಾ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದಲ್ಲಿ
ಸ್ಥಾನ ಪಡೆದು ಅಚ್ಚರಿಯ ಸಾಧನೆ ಮಾಡಿದ್ದಾರೆ.

ಬಡತನದಲ್ಲೇ ಬೆಳೆದ ಇಸ್ರೋದಲ್ಲಿ ದೊಡ್ಡ ಹುದ್ದೆ ಪಡೆದುಕೊಂಡಿದ್ದಾರೆ‌‌.ಇಸ್ರೋದಲ್ಲಿ ತಾಂತ್ರಿಕ ಸಹಾಯಕಳಾಗಿ ನಿಯುಕ್ತಿಯಾಗಿರುವ ಸನಾ ವಿದಿಶಾದ ನಿವಾಸಿಯಾಗಿದ್ದಾರೆ.

ತನ್ನ ಆಯ್ಕೆ ಬಗ್ಗೆ ಮಾತನಾಡಿದ ಸನಾ,ಬಡವರು ಮಕ್ಕಳು ಬೆಳೆಯುವುದಿಲ್ಲ ಎಂಬುದನ್ನು ನಾವು ಸುಳ್ಳು ಮಾಡಬೇಕು. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಸಂಪೂರ್ಣ ನಂಬಿಕೆಯೊಂದಿಗೆ ಮುಂದೆ ಸಾಗಬೇಕು ಆಗ ಯಶಸ್ಸು ಸಿಗುತ್ತದೆ ಎಂದು ಸನಾ ಹೇಳಿದ್ದಾರೆ.

ನನ್ನ ತಂದೆ-ತಾಯಿ ನಾನು ಮಾಡಿದ ಸಾಧನೆಗೆ ಪ್ರೇರಣೆ ಎಂದು ಸನಾ ಇದೇ ವೇಳೆ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್