ಶಿಶ್ನದಲ್ಲಿ ಗೆಡ್ಡೆ ಇದೆ ಎಂದು ವೈದ್ಯರು ರೋಗಿಯೊಬ್ಬನ ಶಿಶ್ನವನ್ನು ಕತ್ತರಿಸಿರುವ ಘಟನೆ ವರದಿಯಾಗಿದೆ.
ಅರೆಝೋದಲ್ಲಿನ ಸ್ಯಾನ್ ಡೊನಾಟೊ ಆಸ್ಪತ್ರೆಯಲ್ಲಿ
60 ವರ್ಷದ ರೋಗಿಯ ಶಿಶ್ನವನ್ನು ವೈದ್ಯರು ಗೆಡ್ಡೆ ಇದೆ ಎಂದು ತಪ್ಪಾಗಿ ಗ್ರಹಿಸಿ ಕತ್ತರಿಸಿದ್ದಾರೆ.
ಬಳಿಕ ತಪ್ಪಿನ ಅರಿವಾಗಿ ಪುನಃ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ರೋಗಿಯ ಜೀವಕ್ಕೆ ಅಪಾಯ ಇಲ್ಲವಾದರೂ ಜೀವನ ಪೂರ್ತಿ ನೋವಿನಲ್ಲಿಯೇ ಇರುವ ಸ್ಥಿತಿ ಉಂಟಾಗಿದೆ.
ಇದೀಗ ಸಂತ್ರಸ್ತ ವೃದ್ದ, ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ 1 ಮಿಲಿಯನ್ ಯುರೋ ಪರಿಹಾರಕ್ಕೆ ಮೊಕದ್ದಮೆ ಹೂಡಿದ್ದಾರೆ.