ನಿರೂಪಕಿ ಸಲ್ಮಾಗೆ ಕೊಂದು ಹೂತು ಹಾಕಿದ್ದ ಮಧು ಸಾಹು; 5 ವರ್ಷದ ಬಳಿಕ ಬೆಚ್ಚಿಬೀಳಿಸುವ ಘಟನೆ ಬಯಲು..

ನಿರೂಪಕಿ ಸಲ್ಮಾಗೆ ಕೊಂದು ಹೂತು ಹಾಕಿದ್ದ ಮಧು ಸಾಹು; 5 ವರ್ಷದ ಬಳಿಕ ಘಟನೆ ಬಯಲು..

ಛತ್ತೀಸ್ ಗಢ;ಸುದ್ದಿ ವಾಹಿನಿ ನಿರೂಪಕಿ ಸಲ್ಮಾ ಸುಲ್ತಾನ ಲಷ್ಕರ್ ಎಂಬವರನ್ನು ಆಕೆಯ ಜೊತೆ ಲಿವ್ ಇನ್ ಟುಗೆದರ್ ಸಂಬಂಧದಲ್ಲಿದ್ದ ಮಧು ಸಾಹು ಎಂಬಾತ ಹತ್ಯೆಗೈದು ಹೂತು ಹಾಕಿದ್ದು, ಇದೀಗ ಪೊಲೀಸರು ಆಕೆಯ ಅಸ್ಥಿಪಂಜರವನ್ನು ಹೊರತೆಗೆದಿದ್ದಾರೆ.

2018ರಲ್ಲಿ ಘಟನೆ ನಡೆದಿದ್ದು, ಸುಮಾರು ಐದು ವರ್ಷಗಳ ನಂತರ, ಕೊರ್ಬಾ ಪೊಲೀಸರು 11 ಗಂಟೆಗಳ ಕಾರ್ಯಾಚರಣೆ ಮಾಡಿ ಛತ್ತೀಸ್‌ಗಢದ ಕೊರ್ಬಾ ನಗರದ ರಾಷ್ಟ್ರೀಯ ಹೆದ್ದಾರಿಯ ಕೆಳಗಿನಿಂದ ಸುದ್ದಿ ನಿರೂಪಕಿಯ ಅಸ್ಥಿಪಂಜರವನ್ನು ಅಗೆದಿದ್ದಾರೆ.

ಮೃತ ಸಂತ್ರಸ್ತೆ ಸಲ್ಮಾ ಸುಲ್ತಾನ ಲಷ್ಕರ್, ಸುಮಾರು 30 ವರ್ಷ ವಯಸ್ಸಿನವರು ಎಂದು ಹೇಳಲಾಗಿದ್ದು, ಅವರು ಛತ್ತೀಸ್‌ಗಢದ ಸ್ಥಳೀಯ ಸುದ್ದಿ ವಾಹಿನಿಯಲ್ಲಿ ಸುದ್ದಿ ನಿರೂಪಕರಾಗಿದ್ದರು.

2018ರ ಅಕ್ಟೋಬರ್‌ನಲ್ಲಿ ಆಕೆಯ ಲೈವ್-ಇನ್ ಪಾಲುದಾರ ಮಧು ಸಾಹು(37) ಜಿಮ್ ತರಬೇತುದಾರನಾಗಿದ್ದು, ಆತ ಇಬ್ಬರು ಸಹಾಯಕರ ಜೊತೆ ಸೇರಿ ಸುಲ್ತಾನಗೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಆಕೆಯ ಕಾಲುಗಳನ್ನು ಕಟ್ಟಿ ಕಂಬಳಿಯಲ್ಲಿ ಸುತ್ತಲಾಗಿತ್ತು.

ನಾವು ಆಕೆಯ ತಾಯಿ ಮತ್ತು ಒಡಹುಟ್ಟಿದವರ ಡಿಎನ್‌ಎ ಮಾದರಿ ಪಡೆದು ಪರೀಕ್ಷೆ ನಡೆಸುತ್ತೇವೆ. ಅಸ್ಥಿಪಂಜರದ ಅವಶೇಷಗಳು ಸುಲ್ತಾನಳದ್ದ ಎಂದು ಖಚಿತಪಡಿಸಿಕೊಳ್ಳಲು ಈ ಮಾದರಿಗಳನ್ನು ಡಿಎನ್‌ಎ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಕೊರ್ಬಾ ಜಿಲ್ಲೆಯ ಸೂಪರಿಂಟೆಂಡೆಂಟ್ ಐಪಿಎಸ್ ಉದಯ್ ಕಿರಣ್ ಹೇಳಿದ್ದಾರೆ.

2018ರಲ್ಲಿ ಸಲ್ಮಾಗೆ ಮಧು ಸಾಹು ಭೇಟಿಯಾಗಿದ್ದ.ಬಳಿಕ ಆಕೆಯ ಜೊತೆ ಪ್ರೀತಿಯ ನಾಟಕವಾಡಿ ಲಿವ್-ಇನ್ ಸಂಬಂಧದಲ್ಲಿದ್ದ.ಕೊರ್ಬಾ ನಗರದ ಕಾಲೋನಿಯ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.

2018ರ ಅಕ್ಟೋಬರ್ 21ರಂದು, ಸಾಹು ಸಲ್ಮಾಳೊಂದಿಗೆ ಜಗಳವಾಡಿದನು ಮತ್ತು ಅವನ ಸ್ನೇಹಿತ ಕೌಶಲ್ ಶ್ರೀವಾಸ್ ಗೆ ಕರೆ ಮಾಡಿದನು ಬಳಿಕ ಸಾಹು ಆಕೆಗೆ ಕೊಲೆ ಮಾಡಿ ಯಾರಿಗೂ ತಿಳಿಯದಂತೆ ಹೂತು ಹಾಕಿದ್ದನು ಎಂದು ಪೊಲೀಸ್ ಮೂಲಗಳು ಹೇಳಿದೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು