ಬಂಟ್ವಾಳ; ಭಜರಂಗದಳದ ಮುಖಂಡನ ಮೃತದೇಹ ಪತ್ತೆ ಸ್ಥಳಕ್ಕೆ ಎಸ್ಪಿ ಭೇಟಿ‌ ನೀಡಿ ಪರಿಶೀಲನೆ

ಬಂಟ್ವಾಳ:ನೇತ್ರಾವತಿ ನದಿಯಲ್ಲಿ ಭಜರಂಗದಳದ ಮುಖಂಡನ ಮೃತದೇಹ ಪತ್ತೆ ಸ್ಥಳಕ್ಕೆ ಎಸ್ ಪಿ ಹೃಷಿಕೇಶ್ ಭಗವಾನ್ ಸೋನಾವಣೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಜೀಪ ನಡುಗ್ರಾಮದ ನಿವಾಸಿ ರಾಜೇಶ್ ಪೂಜಾರಿ ಮೃತದೇಹ ಪಾಣೆಮಂಗಳೂರು ಹಳೆ ಸೇತುವೆಯ ಅಡಿಯಲ್ಲಿ ನೇತ್ರಾವತಿ ನದಿಯಲ್ಲಿ ಸಿಕ್ಕಿದೆ.

ರಾಜೇಶ್ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಬುಧವಾರ ಬೆಳಿಗ್ಗೆ 8.30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋದವರು ಮನೆಗೆ ವಾಪಸು ಬಂದಿರಲಿಲ್ಲ.ರಾಜೇಶ್ ಸಂಬಂಧಿ ಧೀರಜ್ ಅವರು ಮನೆಯವರಿಗೆ ಕರೆ ಮಾಡಿ ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಸ್ಕೂಟರ್ ಇರುವುದನ್ನು ಹೇಳಿದ್ದಾರೆ.

ಆ ಬಳಿಕ ಮನೆಯವರು ಹಾಗೂ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಸಾವಿನ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದು, ಅಪಘಾತವೋ? ಆತ್ಮಹತ್ಯೆಯೋ? ಎಂಬ ಶಂಕೆ ಮೂಡಿದೆ.

ಟಾಪ್ ನ್ಯೂಸ್