ಗಂಡನ ಮನೆಯ ವಿಚಿತ್ರ ಆಚರಣೆಗೆ ಕಣ್ಣೀರಿಟ್ಟ ನವವಿವಾಹಿತೆ; ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರಕರಣ

ಕೇರಳ;ಪಲಕ್ಕಾಡ್​ನಲ್ಲಿ ನಡೆದ ವಿವಾಹ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು,ಇದೀಗ ಪ್ರಕರಣಕ್ಕೆ ಸಂಬಂಧಿಸಿ ಕೇಸ್ ಕೂಡ ದಾಖಲಾಗಿದೆ ಎಂದು ವರದಿಯಾಗಿದೆ.

ಮದುವೆಯಾಗಿ ಮೊದಲ ಬಾರಿ ಗಂಡನ ಮನೆಗೆ ಬಂದ ವಧು, ಅಲ್ಲಿನ ವಿಚಿತ್ರ ಸಂಸ್ಕೃತಿಯಿಂದ ಕಣ್ಣೀರು ಹಾಕಿದ್ದಾಳೆ.

ಮನೆಯ ಪ್ರವೇಶಕ್ಕೂ ಮುನ್ನ ನೂತನ ವಧು-ವರರಿಗೆ ಆರತಿ ಬೆಳಗಲಾಗಿದೆ. ವಧು, ಗಂಡನ ಮನೆಗೆ ಬಲಗಾಲು ಇಟ್ಟು ಪ್ರವೇಶ ಮಾಡುವಾಗ ಹಿಂದೆ ನಿಂತಿದ್ದ ಸಂಬಂಧಿಕರೊಬ್ಬರು ವಧು ಮತ್ತು ವರನ ತಲೆಯನ್ನು ಪರಸ್ಪರ ಡಿಕ್ಕಿ ಹೊಡೆಸುತ್ತಾರೆ.

ಇದು ಅಲ್ಲಿನ ಸಂಪ್ರದಾಯವಂತೆ. ಹೊಸದಾಗಿ ಮದುವೆಯಾಗುವ ವಧು-ವರರ ತಲೆಯನ್ನು ಡಿಕ್ಕಿ ಹೊಡೆಸುವುದರ ಹಿಂದೆ ಕಾರಣವಿದೆ ಎನ್ನುತ್ತಾರೆ.
ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ ಎನ್ನಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ತಲೆ ಡಿಕ್ಕಿ ಹೊಡೆದ ರಭಸಕ್ಕೆ ವಧು ಸ್ಥಳದಲ್ಲೇ ಕಣ್ಣೀರಾಕಿದ್ದಾಳೆ.ಈ ವೇಳೆ ವರ, ವಧುವನ್ನು ಸಮಾಧಾನ ಮಾಡಲು ಯತ್ನಿಸಿದ್ದಾನೆ. ಬಳಿಕ ಇಬ್ಬರು ಮನೆಯನ್ನು ಪ್ರವೇಶಿಸಿದ ದೃಶ್ಯ ವಿಡಿಯೋದಲ್ಲಿ ಇದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದರ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗ ಸಹ ಸುಮಟೋ ಪ್ರಕರಣ ದಾಖಲಿಸಿಕೊಂಡಿದ್ದು, ತಕ್ಷಣ ವರದಿಯನ್ನು ಸಲ್ಲಿಸುವಂತೆ ಕೊಲ್ಲೆಂಗೋಡ್​ ಠಾಣಾ ಪೊಲೀಸರಿಗೆ ಸೂಚನೆ ನೀಡಿದೆ.

ಜೂನ್​ 25ರಂದು ಪಲಕ್ಕಾಡ್​ನ ಪಲ್ಲಸ್ಸೇನಾ ಮೂಲದ ಸಚಿನ್​ ಮತ್ತು ಮುಕ್ಕಮ್​ ಮೂಲದ ಸಾಜ್ಲಾ ವಿವಾಹದಲ್ಲಿ ಈ ಘಟನೆ ನಡೆದಿದೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ