ಸಚಿನ್ ಪೈಲೆಟ್ & ಫಾರೂಕ್ ಅಬ್ಧುಲ್ಲ ಪುತ್ರಿ ಸಾರ ನಡುವೆ ವಿಚ್ಛೇದನ?

ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ತಮ್ಮ ಪತ್ನಿ ಸಾರಾ ಅಬ್ದುಲ್ಲಾ ಅವರಿಂದ ವಿಚ್ಛೇದನ ಪಡೆದಿರುವ ಬಗ್ಗೆ ವರದಿಯಾಗಿದೆ.

ಪೈಲಟ್ ಸಲ್ಲಿಸಿದ ಅಫಿಡವಿಟ್ ನಲ್ಲಿ ತಮ್ಮ ಹೆಂಡತಿಯ ಹೆಸರಿನ ಜೊತೆಗೆ ‘ವಿಚ್ಛೇದಿತ’ ಎಂಬ ಪದವನ್ನು ಬಳಸಿದ್ದಾರೆ ಎನ್ನಲಾಗಿದೆ.

ಸಚಿನ್‌-ಸಾರಾ ದಂಪತಿಗಳು ಜನವರಿ 15,2004 ರಂದು ವಿವಾಹವಾದರು. ಸಾರಾ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಮಗಳು. ಪಾರೂಕ್‌ ಅಬ್ದುಲ್ಲಾ ಅವರು ಈ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಈ ವಿವಾಹಕ್ಕೆ ಅಬ್ದುಲ್ಲಾ ಕುಟುಂಬದ ತೀವ್ರ ವಿರೋಧವಿತ್ತು. ಸಚಿನ್- ಸಾರಾ ಮದುವೆಗೆ ಫಾರೂಕ್ ಅಬ್ದುಲ್ಲಾ ಹಾಜರಾಗಲಿಲ್ಲ. ಸಚಿನ್ ಅವರ ಕುಟುಂಬವು ಅಂತಿಮವಾಗಿ ಮದುವೆಯನ್ನು ಬೆಂಬಲಿಸಿದೆ ಎನ್ನಲಾಗಿದೆ.

ಸಚಿನ್ ಮತ್ತು ಸಾರಾ ಲಂಡನ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಸಚಿನ್ ಪೈಲಟ್ ಲಂಡನ್‌ನಲ್ಲಿ ಎಂಬಿಎ ಓದುತ್ತಿದ್ದಾಗ ಸಾರಾ ಅವರನ್ನು ಭೇಟಿಯಾಗಿದ್ದರು.

ಸಚಿನ್ ಪೈಲಟ್ ಮಂಗಳವಾರ ಟೋಂಕ್ ಅಸೆಂಬ್ಲಿ ಸ್ಥಾನದಿಂದ ನಾಮಪತ್ರ ಸಲ್ಲಿಸಿದ್ದರು. ಅವರ ಚುನಾವಣಾ ಅಫಿಡವಿಟ್‌ನಲ್ಲಿ ಸಂಗಾತಿಯ ವಿವರಗಳಿಗಾಗಿ ಇರುವ ಕಾಲಂನಲ್ಲಿ ವಿಚ್ಛೇದನ ಎಂದು ನಮೂದಿಸಿದ್ದಾರೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್