ಬೆಂಗಳೂರು: ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ನಾಮನಿರ್ದೇಶನವನ್ನು ರಾಜ್ಯ ಸರಕಾರವು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶ ಹೊರಡಿಸಿದೆ.
ಶಾಫಿ ಸಅದಿ ಸೇರಿ ನಾಲ್ವರು ಸದಸ್ಯರ ನಾಮನಿರ್ದೇಶನವನ್ನು ರದ್ದುಗೊಳಿಸಲಾಗಿದೆ.
ಮೀರ್ ಅಝರ್ ಹುಸೈನ್, ಜಿ.ಯಾಕೂಬ್ ಹಾಗೂ ಐಎಎಸ್ ಅಧಿಕಾರಿ ಝೆಹೆರಾ ನಸೀಮ್ ಅವರ ನಾಮ ನಿರ್ದೇಶನವನ್ನು ರದ್ದುಪಡಿಸಿ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿದೆ.
ಆಟವಾಡುವಾಗ ವಿದ್ಯುತ್ ಶಾಕ್ ಹೊಡೆದು ಬಾಲಕಿ ಮೃತ್ಯು
ಬೆಳಗಾವಿ:ಆಟವಾಡುವಾಗ ಹೈಟೆನ್ಶನ್ ವೈರ್ ಸ್ಪರ್ಶಿಸಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಮಚ್ಛೆ ಗ್ರಾಮದ ಬಳಿಯಲ್ಲಿ ನಡೆದಿದೆ.
ಮಧುರಾ ಎಂಬ ಬಾಲಕಿ ಆಟವಾಡುತ್ತಿದ್ದಾಗ ಮನೆ ಮುಂದಿನ ಹೈಟೆನ್ಷನ್ ವೈಯರ್ ತಾಗಿ ಮೃತಪಟ್ಟಿದ್ದಾಳೆ. ಮನೆಯ ಮುಂಭಾಗವೇ ವಿದ್ಯುತ್ ತಂತಿ ಹಾದುಹೋಗಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಹೈಟೆನ್ಶನ್ ವೈರ್ ಹಾದುಹೋಗಿದ್ದರಿಂದ ಮನೆ ಕಟ್ಟದಂತೆ ಹೆಸ್ಕಾಂ ಅಧಿಕಾರಿಗಳು ಈ ಹಿಂದೆಯೇ ನೋಟಿಸ್ ಜಾರಿ ಮಾಡಿದ್ದರು. ಆದರೂ ನಿರ್ಲಕ್ಷ್ಯ ವಹಿಸಿ ಬಾಲಕಿ ಕುಟುಂಬಸ್ಥರು ಮನೆಯನ್ನು ನಿರ್ಮಿಸಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.