ಆರೆಸ್ಸೆಸ್ ನ ಮಾಜಿ ಸ್ವಯಂಸೇವಕರ ಗುಂಪು ಮಧ್ಯಪ್ರದೇಶದಲ್ಲಿ ರಾಜಕೀಯ ಪಕ್ಷ ಜನಹಿತ್ ಪಾರ್ಟಿಯನ್ನು ರಚಿಸುವ ನಿರ್ಧಾರವನ್ನು ಪ್ರಕಟಿಸಿದೆ.
ಆರ್‌ಎಸ್‌ಎಸ್‌ನ ಮಾಜಿ ಪ್ರಚಾರಕ ಅಭಯ್ ಜೈನ್ ಅವರು ಭೋಪಾಲ್ ಬಳಿಯ ಮಿಸ್ರೋಡ್‌ನಲ್ಲಿ ತಮ್ಮ ಮಾಜಿ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿ ನಂತರ ಮಾದ್ಯಮದ ಜೊತೆ ಮಾತನಾಡಿ ಜನಹಿತ್ ಪಾರ್ಟಿ ರಚಿಸಿರುವ ಬಗ್ಗೆ ಘೋಷಿಸಿದ್ದಾರೆ.
ತಮ್ಮ ಇನ್ನೂ ನೋಂದಣಿಯಾಗದ ಪಕ್ಷವು ಬಿಜೆಪಿಯ ಮತಗಳನ್ನು ಪಡೆಯಲಿದೆ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಎಲ್ಲಾ 230 ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಇಳಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ನಮ್ಮ ರಾಜಕೀಯ ಗುರಿ ದೂರದೃಷ್ಟಿಯಿಂದ ಕೂಡಿದೆ ಎಂದು ಅವರು ಹೇಳಿದರು.
ಜಾರ್ಖಂಡ್‌ನ ಐವರು ಆರ್‌ಎಸ್‌ಎಸ್ ಹಿನ್ನೆಲೆ ಇರುವವರು ಒಳಗೊಂಡಂತೆ 200ಕ್ಕೂ ಹೆಚ್ಚು ಜನರು ಮಿಸ್ರೋಡ್‌ನಲ್ಲಿ ತಮ್ಮ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಜೈನ್ ಪಿಟಿಐಗೆ ದೂರವಾಣಿಯಲ್ಲಿ ತಿಳಿಸಿದರು.