ನವದೆಹಲಿ:ಸೋಮವಾರ ಜೈಪುರ-ಮುಂಬೈ ರೈಲಿನಲ್ಲಿ ನಾಲ್ವರನ್ನು ಕೊಂದ ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಜವಾನನಾಗಿ ಕೆಲಸ ಮಾಡುತ್ತಿದ್ದ ಆರೋಪಿಯ ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕಾಗಿ ಕಳುಹಿಸಲಾಗಿದೆ.
ಜೈಪುರ್-ಮುಂಬೈ ರೈಲಿನಲ್ಲಿ ಇತ್ತೀಚೆಗೆ ಪಾಲ್ಘರ್ ಸಮೀಪ ತನ್ನ ಹಿರಿಯ ಸಹೋದ್ಯೋಗಿ ಸಹಿತ ನಾಲ್ಕು ಮಂದಿಯನ್ನು ಗುಂಡಿಕ್ಕಿ ಸಾಯಿಸಿದ ರೈಲ್ವೆ ಪೊಲೀಸ್ ಪಡೆಯ ಕಾನ್‌ಸ್ಟೇಬಲ್ ಚೇತನ್ ಸಿಂಗ್‌ಗೆ ಯಾವುದೇ ಮಾನಸಿಕ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯಕೀಯ ತಪಾಸಣೆ ಹೇಳಿದೆ ಎಂದು ರೈಲ್ವೇ ಇಲಾಖೆ ಹೇಳಿದ ಹೇಳಿಕೆಯನ್ನು ಹಿಂಪಡೆದುಕೊಂಡಿದೆ.
ಆರೋಪಿ ಕಾನ್‌ಸ್ಟೇಬಲ್ ಗಂಭೀರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆಂಬ ಮಾಧ್ಯಮ ವರದಿಗಳ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ರೈಲ್ವೆ ಸಚಿವಾಲಯ ಈ ವಿಚಾರವನ್ನು ಸರಕಾರಿ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದಷ್ಟೇ ಹೇಳಿದ್ದರು.
ಜುಲೈ 31ರಂದು ಚೇತನ್ ಸಿಂಗ್ ತನ್ನ ಎಆರ್‌ಎಂ ರೈಫಲ್ (ಎಕೆ-47) ನಿಂದ ತನ್ನ ಹಿರಿಯ ಸಹೋದ್ಯೋಗಿ ಎಎಸ್‌ಐ ಮೀನಾ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದ.ಪ್ರಕರಣ ದೇಶಾದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.