ನೀವು ಭಾರತದಲ್ಲಿ ವಾಸಿಸಲು ಬಯಸಿದರೆ, ಮೋದಿ, ಯೋಗಿಗೆ ಮತ ಚಲಾಯಿಸಿ; ರೈಲಿನಲ್ಲಿ 4 ಜನರನ್ನು ಹತ್ಯೆ ಬಳಿಕ ಆರ್‌ಪಿಎಫ್ ಕಾನ್‌ಸ್ಟೆಬಲ್ ಹೇಳಿಕೆ-ವಿಡಿಯೋ ಉಲ್ಲೇಖಿಸಿ ವರದಿ

ಮುಂಬೈ: ಚಲಿಸುತ್ತಿರುವ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್‌ನಲ್ಲಿ ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ರೈಲ್ವೇ ರಕ್ಷಣಾ ಪಡೆಯ ಕಾನ್‌ಸ್ಟೆಬಲ್ ಸೋಮವಾರ ತನ್ನ ಹಿರಿಯ ಸಹೋದ್ಯೋಗಿ ಮತ್ತು ಎರಡು ಬೋಗಿಗಳಲ್ಲಿ ಇದ್ದ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀರಾ ರೋಡ್ ಮತ್ತು ದಹಿಸರ್ ನಿಲ್ದಾಣಗಳ ನಡುವೆ (ಮುಂಬೈ ಉಪನಗರ) ನಿಂತಿದ್ದ ರೈಲಿನ ಚೈನ್ ಎಳೆದು ಪರಾರಿಯಾಗಲು ಯತ್ನಿಸುತ್ತಿದ್ದಾಗ ಆರೋಪಿಗೆ ಬಂಧಿಸಲಾಗಿದೆ.

ಕಾನ್‌ಸ್ಟೆಬಲ್ ಚೇತನ್ ಸಿಂಗ್ (34) ತನ್ನ ಬಳಿಯಿದ್ದ ಶಸ್ತ್ರಾಸ್ತ್ರದಿಂದ ಆರ್‌ಪಿಎಫ್ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಟಿಕಾ ರಾಮ್ ಮೀನಾ ಮತ್ತು ಬಿ5 ಕೋಚ್‌ನಲ್ಲಿದ್ದ ಇನ್ನೊಬ್ಬ ಪ್ರಯಾಣಿಕನನ್ನು ಗುಂಡಿಕ್ಕಿ ಕೊಂದಿದ್ದಾನೆ. ಅವರು B6 ಕೋಚ್‌ನಲ್ಲಿ ಮತ್ತೊಬ್ಬ ಪ್ರಯಾಣಿಕನನ್ನು ಗುಂಡಿಕ್ಕಿ ಕೊಂದಿದ್ದಾರೆ ಮತ್ತು B5 ಮತ್ತು B6 ಕೋಚ್‌ಗಳ ನಡುವೆ ಪ್ಯಾಂಟ್ರಿ ಕಾರಿನಲ್ಲಿ ಮತ್ತೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೀಗ ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಆರೋಪಿ ತನ್ನ ಕೈಯಲ್ಲಿ ಬಂದೂಕು ಹಿಡಿದು ಪ್ರಯಾಣಿಕರಿಗೆ ಬೆದರಿಕೆ ಹಾಕುತ್ತಾನೆ. ಪ್ರಯಾಣಿಕನ ಮೃತದೇಹವೂ ಆತನ ಪಾದಗಳ ಬಳಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಾನು ಕೊಂದ ವ್ಯಕ್ತಿಗಳು ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದಾರೆ ಎಂದು ಸಿಂಗ್ ಹೇಳುವುದನ್ನು ಕೇಳಬಹುದು. ನಂತರ ಮಾತನಾಡಿ ಮಾಧ್ಯಮಗಳು ಕೂಡ ಇದನ್ನೇ ಹೇಳುತ್ತವೆ ಮತ್ತು ಯಾರೇ ಆಗಲಿ ಬದುಕಲು ಇಚ್ಛಿಸುವವರು “ಮೋದಿ ಮತ್ತು ಯೋಗಿ”ಗೆ ಮಾತ್ರ ಮತ ಹಾಕಬೇಕು ಎಂದು ಹೇಳಿದ್ದಾನೆ.ಇದು ವಿಡಿಯೋದಲ್ಲಿ ಉಲ್ಲೇಖಿತವಾಗಿದೆ ಎನ್ನಲಾಗಿದೆ.ಆದರೆ ಫ್ರೀ ಪ್ರೆಸ್ ಜರ್ನಲ್ ಸ್ವತಂತ್ರವಾಗಿ ವೀಡಿಯೊದ ನೈಜತೆ ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ.

ಘಟನೆಯ ನಂತರ ಆರ್‌ಪಿಎಫ್ ಕಾನ್‌ಸ್ಟೆಬಲ್ ಪರಾರಿಯಾಗಲು ಯತ್ನಿಸಿದ್ದಾನೆ.

ಮೃತ ಪ್ರಯಾಣಿಕರನ್ನು ಅಬ್ದುಲ್ ಖಾದಿರ್ಭಾಯಿ ಮೊಹಮ್ಮದ್ ಹುಸೇನ್ ಭಾನ್ಪುರ್ವಾಲಾ (48), ಅಖ್ತರ್ ಅಬ್ಬಾಸ್ ಅಲಿ (48) ಮತ್ತು ಸದರ್ ಮೊಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದೆ.

ಮುಂಬೈಗೆ ಹೋಗುವ ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಾಪಿ ನಿಲ್ದಾಣವನ್ನು (ಗುಜರಾತ್‌ನಲ್ಲಿ) ದಾಟಿದ ನಂತರ ಬೆಳಿಗ್ಗೆ 5 ಗಂಟೆಯ ನಂತರ ಈ ಘಟನೆ ಸಂಭವಿಸಿದೆ.

ಬೆಂಗಾವಲು ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್, ತನ್ನ ಹಿರಿಯ ಟೀಕಾ ರಾಮ್ ಮೀನಾ ಮೇಲೆ ಗುಂಡು ಹಾರಿಸಿ ಮತ್ತೆ ಮೂವರು ಪ್ರಯಾಣಿಕರನ್ನು ಕೊಂದರು ಎಂದು ರೈಲ್ವೆ ಪೊಲೀಸ್ (ಜಿಆರ್‌ಪಿ) ಕಮಿಷನರ್ ರವೀಂದ್ರ ಶಿಶ್ವೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು