ಬೆಂಗಳೂರು:ಇಬ್ಬರು ಉನ್ನತ ಅಧಿಕಾರಿಗಳ ಹೇಳಿಕೆ, ಪೋಸ್ಟ್ ಗಳು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮಹಿಳಾ ಐಎಎಸ್ ರೋಹಿಣಿ ಸಿಂಧೂರಿ ಹಾಗೂ ಮಹಿಳಾ ಐಪಿಎಸ್ ಡಿ.ರೂಪಾ ನಡುವಿನ ಜಟಾಪಟಿ ಮುಂದುವರಿದಿದೆ.
ಡಿ.ರೂಪಾ ಬಿಡುಗಡೆ ಮಾಡಿರುವ ಖಾಸಗಿ ಪೋಟೋ ಮತ್ತು 19 ಅಂಶಗಳ ಬಗ್ಗೆ ಪ್ರತಿಕ್ರಿಯಿಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು, ವೈಯಕ್ತಿಕ ನಿಂದನೆ ಹಾಗೂ ತೇಜೋವಧೆ ವಿರುದ್ಧ ಐಪಿಎಸ್ ಸೆಕ್ಷನ್ ಗಳಡಿ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ.
ಇದರ ಜೊತೆಗೆ ಡಿ.ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಆಧಾರರಹಿತ ಆರೋಪ ಮಾಡಿ ಮಾಧ್ಯಮಗಳ ಗಮನ ಸೆಳೆಯುತ್ತಿದ್ದಾರೆ. ವೈಯಕ್ತಿಕ ನಿಂದನೆ, ತೇಜೋವಧೆ ವಿರುದ್ಧ IPS ಸೆಕ್ಷನ್ ಗಳಡಿ ಕಾನೂನು ಕ್ರಮಕ್ಕಾಗಿ ಸಕ್ಷಮ ಪ್ರಾಧಿಕಾರದ ಮುಂದೆ ದೂರು ಸಲ್ಲಿಸುತ್ತೇನೆ ಎಂದು ಸಿಂಧೂರಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ ಐಪಿಎಸ್ ಅಧಿಕಾರಿ ಡಿ.ರೂಪಾ, ಮಾನಸಿಕ ಸ್ಥಿಮಿತ ಯಾರು ಕಳೆದುಕೊಂಡಿರುವುದು. ನಿಮ್ಮ ಬಣ್ಣ ಬಯಲಾಯಿತು ಎಂದು ಹತಾಶೆಯ ಮಾತೇ?
ಒಂದು ಕಡೆ ಹೇಳಿದ್ದೀರಿ, ಡಿಕೆ ರವಿ ಗೆ mental illness ಇದ್ದದ್ದರಿಂದ ಸತ್ತದ್ದು ಅಂತ.
ಇಲ್ಲಿ, ನಿಮ್ಮನ್ನು expose ಮಾಡಿದ್ದಕ್ಕೆ ನನ್ನ ಮೇಲೆ ಈ ಆರೋಪ.ನಿಮ್ಮ corruption ಮಾಡಿದ ಚಾಟ್ ಗಳೂ ನನ್ನ ಬಳಿ ಇವೆ.ನನಗೆ ಕ್ಷಮೆ ಕೇಳದೆ ಇದ್ದರೆ ಇದೆ ನೀವು ಹೇಳಿದ ಮಾತಿಗೆ ನಿಮ್ಮ ಮೇಲೆ defamation ಹಾಕುತ್ತೇನೆ. ಅಲ್ಲದೆ, ನೀವು ಸೇವಾ ನಿಯಮ ಉಲ್ಲಂಘಿಸಿದ ಬಗ್ಗೆ ಕಾನೂನು ಕ್ರಮ. ನಿಮ್ಮ ಮೋಜಿನ ಸ್ವಿಮ್ಮಿಂಗ್ ಪೂಲ್ ಡಿಸಿ ಮನೆಯಲ್ಲಿ ಸಾರ್ವಜನಿಕ ಹಣದಿಂದ ಕಟ್ಟಿದ್ದು , ಅದೂ covid ಟೈಂ ಅಲ್ಲಿ ಹಾಗೂ ಹೆರಿಟೇಜ್ building ಕಾಯ್ದೆ ಉಲ್ಲಂಘನೆ ಇವುಗಳ ಬಗ್ಗೆ ಶಿಸ್ತು ಕ್ರಮ, ಇದನ್ನು ನಾನೂ ಫಾಲೋ ಅಪ್ ಮಾಡ್ತೇನೆ. ನೆನಪಿಡಿ ಎಂದು ಹೇಳಿದ್ದಾರೆ.