ಸಂಸತ್ ಕಟ್ಟಡವನ್ನು ಶವ ಪೆಟ್ಟಿಗೆಗೆ ಹೋಲಿಸಿದ ಆರ್ ಜೆಡಿ

ನವದೆಹಲಿ;ನೂತನ ಸಂಸತ್ ಭವನದ ಉದ್ಘಾಟನೆಯನ್ನು ಇಂದು ಪ್ರಧಾನಿ ಮೋದಿ ಮಾಡಿದ್ದಾರೆ.ಪೂಜೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿಯವರೊಂದಿಗೆ ಇದ್ದರು.

ನೂತನ ಸಂಸತ್ ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಪುರೋಹಿತರಿಂದ ಸೆಂಗೋಲ್​​ ಸ್ವೀಕರಿಸಿದ ಪ್ರಧಾನಿ ಮೋದಿಯವರು ಲೋಕಸಭಾ ಸ್ಪೀಕರ್​ ಆಸನದ ಬಳಿ​ ಪ್ರತಿಷ್ಠಾಪನೆ ಮಾಡಿದ್ದಾರೆ.

ನಂತರ ಪ್ರಧಾನಮಂತ್ರಿಯವರು ಹೊಸ ಸಂಸತ್ ಭವನದ ಉದ್ಘಾಟನೆಯ ಸಂಕೇತವಾಗಿ ಫಲಕವನ್ನು ಅನಾವರಣಗೊಳಿಸಿದರು.ಆದರೆ ವಿರೋಧ ಪಕ್ಷಗಳು ರಾಷ್ಟ್ರಪತಿಗೆ ಸಂಸತ್ತು ಉದ್ಘಾಟನೆಗೆ ಅವಕಾಶ ನೀಡದ ಹಿನ್ನೆಲೆ ಕಾರ್ಯಕ್ರಮವನ್ನು ತಿರಸ್ಕರಿಸಿದೆ.

ಸಂಸತ್ತಿನ ಬಗ್ಗೆ ಪ್ರತಿಪಕ್ಷಗಳು ತೀವ್ರ ಟೀಕೆಯನ್ನು ಮಾಡಿದೆ.
ಇದೀಗ ಲಾಲು ಯಾದವ್ ಅವರ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ವಿವಾದಾತ್ಮಕ ಟ್ವೀಟ್ ಮಾಡಿದ್ದು, ಹೊಸ ಸಂಸತ್ ಭವನದ ರಚನೆಯನ್ನು ಶವಪೆಟ್ಟಿಗೆಯೊಂದಿಗೆ ಹೋಲಿಸಿದೆ.

ಪಕ್ಷವು “ಇದು ಏನು?” ಶೀರ್ಷಿಕೆಯಲ್ಲಿ ವಿವಾದಾತ್ಮಕ ಟ್ವೀಟ್‌ನಲ್ಲಿ ಹೊಸ ಸಂಸತ್ತಿನ ರಚನೆಯನ್ನು ಶವಪೆಟ್ಟಿಗೆಯೊಂದಿಗೆ ಹೋಲಿಸಿ ವಿವಾದವನ್ನು ಸೃಷ್ಟಿಸಿದೆ.

ಟಾಪ್ ನ್ಯೂಸ್