ಕಾಸರಗೋಡು:ರಿಯಾಸ್ ಮೌಲವಿ ಕೊಲೆ ಪ್ರಕರಣದಲ್ಲಿ ಸರಕಾರ ಪರ ವಾದಿಸುತ್ತಿದ್ದ ಸ್ಪೆಷಲ್ ಪ್ರಾಸಿಕ್ಯೂಟರ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಚ್ಚಿಯ ಫ್ಲ್ಯಾಟೊಂದರಲ್ಲಿ ನಡೆದಿದೆ.
ಮೂಲತಃ ಮಡಿಕೇರಿ ನಿವಾಸಿ ಹಾಗೂ ನಗರದ ಹಳೆ ಸೂರ್ಲಿನ ಮದ್ರಸಾ ಅಧ್ಯಾಪಕ ರಿಯಾಸ್ ಮೌಲವಿ (28) ಅವರನ್ನು 2017 ಮಾರ್ಚ್ 21ರಂದು ರಾತ್ರಿ ಹಳೆ ಸೂರ್ಲಿನಲ್ಲಿರುವ ಅವರ ವಾಸ ಸ್ಥಳದಲ್ಲಿ ಇರಿದು ಕೊಲೆಗೈಯಲಾಗಿತ್ತು.
ಪ್ರಕರಣದಲ್ಲಿ ಸರಕಾರ ಪರ ವಾದಿಸುತ್ತಿರುವ ಸ್ಪೆಷಲ್ ಪ್ರಾಸಿಕ್ಯೂಟರ್, ಕಲ್ಲಿಕೋಟೆ ಐಎಂಎ ಹಾಲ್ ರಸ್ತೆ ನಡಕ್ಕಾವು ನಿವಾಸಿ ನ್ಯಾಯವಾದಿ ಎಂ.ಅಶೋಕನ್ (60) ಅವರು ಕೊಚ್ಚಿಯ ಫ್ಲ್ಯಾಟೊಂದರಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇವರು ಕೇಸೊಂದಕ್ಕೆ ಸಂಬಂಧಿಸಿ ವಾದಿಸಲು ಮಾವೇಲಿಕ್ಕರೆಗೆ ಹೋಗಿದ್ದರು. ಅಲ್ಲಿಂದ ಹಿಂದಿರುಗಿ ಬರುವ ಸಂದರ್ಭದಲ್ಲಿ ಕೊಚ್ಚಿಯ ಫ್ಲ್ಯಾಟೊಂದರಲ್ಲಿ ತಂಗಿದ್ದರು.ಅಲ್ಲಿ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸಾವಿಗೆ ಹೃದಯಾಘಾತ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕೋಝಿಕ್ಕೋಡ್ ಮೂಲದ ಖ್ಯಾತ ವಕೀಲ ಎಂ. ಅಶೋಕನ್ ಅವರು ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಹಾಜರಾಗಬೇಕಿದ್ದಾಗ ಎರ್ನಾಕುಲಂನಲ್ಲಿ ಸೋಮವಾರ ನಿಧನರಾದರು. ಶ್ರೀ. ಅಶೋಕನ್ ಅವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಡಿಫೆನ್ಸ್ ವಕೀಲರಾಗಿ ಹಲವಾರು ಉನ್ನತ ಮಟ್ಟದ ಕ್ರಿಮಿನಲ್ ಪ್ರಕರಣಗಳಲ್ಲಿ ಟಿ.ಪಿ. ಚಂದ್ರಶೇಖರನ್ ಪ್ರಕರಣ, ಮಧು ಪ್ರಕರಣ (ಅಟ್ಟಪ್ಪಾಡಿ), ಮಾರಡ್ ಹತ್ಯಾಕಾಂಡ, ಮತ್ತು ಶಹೀದ್ ಬಾವ ಕೊಲೆ ಪ್ರಕರಣದಲ್ಲಿ ನ್ಯಾಯವಾದಿಗಳಾಗಿದ್ದರು.
ಅಶೋಕನ್ ಅವರು 2010 ರಲ್ಲಿ ಕ್ಯಾಲಿಕಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದರು. ಹಲವಾರು ಸಾರ್ವಜನಿಕ, ಸಹಕಾರಿ ಮತ್ತು ಖಾಸಗಿ ವಲಯದ ಉದ್ಯಮಗಳಿಗೆ ಕಾನೂನು ಸಲಹೆಗಾರರಾಗಿದ್ದರು ಮತ್ತು ಝಮೋರಿನ್‌ನ ಗುರುವಾಯುರಪ್ಪನ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದರು.