ಮುಸ್ಲಿಮರ 2b ಮೀಸಲಾತಿ ರದ್ಧತಿಗೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂಕೋರ್ಟ್

ಬೆಂಗಳೂರು;ರಾಜ್ಯ ಸರ್ಕಾರದ 2ಬಿ ಮೀಸಲಾತಿ ರದ್ದತಿ ಕುರಿತ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
ಮೀಸಲಾತಿ ರದ್ಧತಿಗೆ ತಾತ್ಕಾಲಿಕ ತಡೆ‌ ನೀಡದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಅವರ ನೇತೃತ್ವದ ಪೀಠ ಈ ಕುರಿತ ವಿಚಾರಣೆಯನ್ನು ಮೇ.9ರವರೆಗೆ ಮುಂದೂಡಿದ್ದು, ಆವರೆಗೆ ಆದೇಶದ ಅನ್ವಯ ಮೀಸಲಾತಿ ಮೊಟಕುಗೊಳಿಸಿ ಯಾವುದೇ ನೇಮಕಾತಿ, ದಾಖಲಾತಿ ಮಾಡಬಾರದು ಎಂದು ತಿಳಿಸಿದೆ.

ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ ಶೇ. 2ರಷ್ಟು ಮೀಸಲಾತಿ ಹಂಚಿಕೆ ಮಾಡಿತ್ತು.

ನ್ಯಾಯಾಲಯದ ಆದೇಶದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.ಕಳೆದ ಬಾರಿ ವಿಚಾರಣೆ ವೇಳೆ ನ್ಯಾಯಪೀಠ
ಸರ್ಕಾರದ ನಿರ್ಧಾರವು ದೋಷ ಪೂರಿತ ಎಂದು ಹೇಳಿತ್ತು.

ಬಸವರಾಜ ಬೊಮ್ಮಯಿ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಮುಸ್ಲಿಮರಿಗಿದ್ದ 4% ಮೀಸಲಾತಿ ರದ್ದುಗೊಳಿಸಿತ್ತು.ಸರಕಾರದ ನಿಲುವಿ ಬಗ್ಗೆ ವ್ಯಾಪಕ ಚರ್ಚೆ ಉಂಟಾಗಿತ್ತು.ಯಾವ ಆಧಾರದಲ್ಲಿ ಮೀಸಲಾತಿ ರದ್ದು ಮಾಡಲಾಗಿದೆ ಎಂದು ಪ್ರಶ್ನೆ ಮೂಡಿತ್ತು.ಅಮಿತ್ ಶಾ ಧರ್ಮದ ಆಧಾರದಲ್ಲಿ ಮೀಸಲಾತಿ ಸಂವಿಧಾನ ಬಾಹಿರ ಎಂದು ಹೇಳಿದ್ದರು.ಆದರೆ ಮುಸ್ಲಿಮರಿಗೆ ಹಿಂದುಳಿಕೆ ಆಧಾರದಲ್ಲಿ ಮೀಸಲಾತಿ ನೀಡಲಾಗಿತ್ತು ಎನ್ನವುದು ಗಮನಾರ್ಹ.

ಟಾಪ್ ನ್ಯೂಸ್

ಹಿಂದೂ ಯುವತಿಯನ್ನು “ಕೇರಳ ಸ್ಟೋರಿ” ವೀಕ್ಷಿಸಲು ಕರೆದೊಯ್ದ ಸಂಸದೆ ಪ್ರಜ್ಞಾ ಸಿಂಗ್; ಆಕೆ ಸಿನಿಮಾ ನೋಡಿದ ಮರುದಿನವೇ ತನ್ನ ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿ!- ವರದಿ

ಭೋಪಾಲ್‌; 19 ವರ್ಷದ ಹಿಂದೂ ಸಮುದಾಯದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ನಿಗದಿಯಾಗಿದ್ದ ಮದುವೆಗೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com