ನೋಟಿನ ಮೇಲೆ ಬರೆದಿದ್ದರೆ ಅದು ಅಮಾನ್ಯವಾಗುತ್ತಾ? ಆರ್ ಬಿಐ ಹೇಳುವುದೇನು?ಇಲ್ಲಿದೆ ಮಾಹಿತಿ…

ನೋಟಿನಲ್ಲಿ ಬರೆದರೆ ಆ ನೋಟು ಅಮಾನ್ಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.ಇದರಿಂದ ಬರಹ ಇದ್ದ ನೋಟ್ ಗಳನ್ನು ಹೊಂದಿರುವವರು ಆತಂಕಕ್ಕೆ ಒಳಗಾಗಿದ್ದರು.

2000 ರೂಪಾಯಿ, 500 ರೂಪಾಯಿ ಸೇರಿ ಯಾವುದೇ ನೋಟುಗಳಲ್ಲಿ ಬರೆದಿದ್ದರೆ ಅದನ್ನು ಅಮಾನ್ಯ ಮಾಡಲಾಗುತ್ತದೆ ಎಂದು ಇತ್ತೀಚೆಗೆ ಆರ್‌ಬಿಐ ನಿಯಮ ಹೇಳಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯು ಸುಳ್ಳಾಗಿದೆ. ಯಾವುದೇ ನೋಟಿನಲ್ಲಿ ಬರೆದಿದ್ದರು ಅದನ್ನು ಅಮಾನ್ಯಗೊಳಿಸಲಾಗುವುದಿಲ್ಲ. ಅದು ಚಾಲವಣೆಯಲ್ಲಿನ ನೋಟಾಗಿಯೇ ಉಳಿಯುತ್ತದೆ. ಆದರೆ ಆರ್‌ಬಿಐ ಮಾತ್ರ ನೋಟಿನಲ್ಲಿ ಬರೆಯಬೇಡಿ ಎಂದು ಜನರಿಗೆ ಮನವಿ ಮಾಡಿದೆ.

ನೋಟಿನ ಮೇಲೆ ತೂತನ್ನು ಮಾಡಬೇಡಿ,ನೋಟನ್ನು ಆಟಿಕೆಗಾಗಿ, ಅಲಂಕಾರಕ್ಕಾಗಿ, ಮಾಲೆ ಮಾಡಿ ಹಾಕಲೆಂದು, ನೃತ್ಯ ಮಾಡುವವರಿಗೆ ಎಸೆಯಲೆಂದು ಬಳಕೆ ಮಾಡಬೇಡಿ ಎಂದು ಆರ್‌ಬಿಐ ತಿಳಿಸುತ್ತದೆ.ನೋಟಿನ ಮೇಲೆ ಬರೆಯಬೇಡಿ ಹಾಗೂ ಅದರ ಮೇಲೆ ಚಿತ್ರವನ್ನು ಮಾಡಬೇಡಿ ಎಂದು ಆರ್‌ಬಿಐ ಮನವಿ ಮಾಡಿದೆ.

ಟಾಪ್ ನ್ಯೂಸ್