1000ರೂ.ಮುಖಬೆಲೆಯ ನೋಟು ಮತ್ತೆ ಚಲಾವಣೆಗೆ ಬರುತ್ತಾ? ಆರ್ ಬಿಐ ಹೇಳುವುದೇನು?

ನವದೆಹಲಿ:ರಿಸರ್ವ್‌ ಬ್ಯಾಂಕ್ 2,000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದೆ. ಇದರ ಬೆನ್ನಲ್ಲಿಯೇ 1,000 ರೂ. ನೋಟುಗಳು ಮತ್ತೆ ಬರುತ್ತವೆ ಎಂಬ ಸುದ್ದಿ ಹರಿದಾಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ 1,000 ರೂ. ನೋಟು ಪರಿಚಯಿಸುವ ಯಾವುದೇ ಆಲೋಚನೆ ಇಲ್ಲ.ಈ ಬಗ್ಗೆಗಿನ ವರದಿಗಳು ಊಹಾತ್ಮಕ ಎಂದು ಹೇಳಿದ್ದಾರೆ.

1,000 ರೂ. ನೋಟುಗಳನ್ನು ಮರು ತರುವ ಯಾವುದೇ ಪ್ರಸ್ತಾಪವಿಲ್ಲ.ಅದು ಗಾಳಿ ಸುದ್ದಿ ಎಂದು ಹೇಳಿದ್ದಾರೆ.ಇನ್ನು 2,000 ರೂ.ನೋಟುಗಳ ವಿನಿಮಯಕ್ಕೆ ಆತುರಪಡುವ ಅಗತ್ಯವಿಲ್ಲ. ಬಹಳಷ್ಟು ಸಮಯ ಇದೆ ಎಂದು ಹೇಳಿದ್ದಾರೆ.

ನೋಟುಗಳ ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ.ಜನರು ಒತ್ತಡವಿಲ್ಲದೆ ನೋಟುಗಳನ್ನು ಹಿಂತಿರುಗಿಸಲು ದೊಡ್ಡ ಗಡುವನ್ನು ನೀಡಲಾಗಿದೆ ಎಂದು ಆರ್‌ಬಿಐ ಗವರ್ನರ್‌ ಹೇಳಿದ್ದಾರೆ.

2,000 ರೂ.ನೋಟುಗಳನ್ನು ಹಿಂತೆಗೆದುಕೊಳ್ಳುವಿಕೆಯಿಂದ ಆರ್ಥಿಕತೆ ಮೇಲೆ ಬೀರುವ ಪರಿಣಾಮ ಅತ್ಯಂತ ಕಡಿಮೆ ಎಂದ ಅವರು, ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಕೇವಲ ಶೇ.10.8ರಷ್ಟು 2,000 ರೂ. ನೋಟುಗಳು ಇವೆ ಎಂದು ಹೇಳಿದ್ದಾರೆ. 2016ರಲ್ಲಿ ನೋಟು ಅಮಾನ್ಯೀಕರಣದ ಬಳಿಕ ನೋಟುಗಳ ಸ್ಥಾನವನ್ನು ತುಂಬಲು 2,000 ರೂ. ಬ್ಯಾಂಕ್ ನೋಟುಗಳನ್ನು ಪರಿಚಯಿಸಲಾಗಿದೆ ಎಂದು ಆರ್‌ಬಿಐ ಮುಖ್ಯಸ್ಥರು ಹೇಳಿದ್ದಾರೆ.

2016, ನವೆಂಬರ್‌ 8ರಂದು 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯೀಕರಣ ಮಾಡಲಾಯಿತು.ಈ ವೇಳೆ ಜನರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದರು.

ಇದೀಗ ಚಲಾವಣೆಯಿಂದ 2 ಸಾವಿರ ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ಕ್ರಮ ಮೂರ್ಖತನದ ನಡೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.ಇದು ಕಪ್ಪುಹಣವನ್ನು ಸುಲಭವಾಗಿ ಸಂಗ್ರಹಿಸಲು ಜನರಿಗೆ ಸಹಾಯ ಮಾಡಲಿದೆ. ಈಗ ಜನರಿಗೆ ತಮ್ಮ ಕರೆನ್ಸಿ ವಿನಿಮಯ ಮಾಡಿಕೊಳ್ಳಲು ರೆಡ್ ಕಾರ್ಪೆಟ್ ನೀಡಿದಂತಾಗಿದೆ ಎಂದು ಮಾಜಿ ಹಣಕಾಸು ಸಚಿವರು ಹೇಳಿದ್ದಾರೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com