ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವಕ ಮೃತ್ಯು
ರಾಯಚೂರು;ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವಕ ಮೃತಪಟ್ಟಿರುವ ಘಟನೆ ತಿಮ್ಮಾಪುರಪೇಟೆ ಬಡಾವಣೆಯಲ್ಲಿ ನಡೆದಿದೆ.
ಸಾವಿಗೀಡಾದವರನ್ನು ಭರತನಗರ ನಿವಾಸಿ ರಮೇಶ(19) ಎಂದು ಗುರುತಿಸಲಾಗಿದೆ.
ಗಣೇಶ ಹಬ್ಬದ ಪ್ರಯುಕ್ತ ರಮೇಶ ಸ್ನೇಹಿತನ ಮನೆಗೆ ಬಂದಿದ್ದ.ಸ್ನೇಹಿತರೊಂದಿಗೆ ಮಾಳಿಗೆ ಮೇಲೆ ಮಲಗಿದ್ದ ಎನ್ನಲಾಗಿದೆ.
ರಮೇಶ ಮಾಳಿಗೆಯಿಂದ ನಿದ್ದೆಯಲ್ಲಿ ಕೆಳಗೆ ಬಿದ್ದಿರಬಹುದು ಎಂದು ಹೇಳಲಾಗಿದೆ. ಸ್ಥಳಕ್ಕೆ ನೇತಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.