ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ರಕ್ ನಲ್ಲಿ ಪ್ರಯಾಣಿಸಿ ಚಾಲಕರ ಸಮಸ್ಯೆಯನ್ನು ಆಲಿಸಿದ್ದಾರೆ.
ರಾಹುಲ್ ಸೋಮವಾರ ರಾತ್ರಿ ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದಾಗ ಹರಿಯಾಣದ ಮುರ್ತಾಲ್‌ನಿಂದ ಅಂಬಾಲಾಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದಾರೆ.
ಹರ್ಯಾಣದ ಮುರ್ತಾಲ್‌ಗೆ ರಾತ್ರಿ 11 ಗಂಟೆ ಸುಮಾರಿಗೆ ಆಗಮಿಸಿದ ರಾಹುಲ್ ಮುರ್ತಾಲ್‌ನಿಂದ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಟ್ರಕ್‌ನಲ್ಲಿ ಪ್ರಯಾಣಿಸಿ ಅಂಬಾಲಾ ತಲುಪಿದರು.
ಮುರ್ತಾಲ್‌ನಿಂದ ಅಂಬಾಲಾಗೆ ಪ್ರಯಾಣಿಸುವಾಗ ರಾಹುಲ್ ಟ್ರಕ್ ಚಾಲಕರೊಂದಿಗೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಜನ ನಾಯಕ ರಾಹುಲ್ ಗಾಂಧಿ ಅವರು ಟ್ರಕ್ ಡ್ರೈವರ್‌ಗಳೊಂದಿಗೆ ತೆರಳಿ ಅವರ ಕಷ್ಟಗಳನ್ನು ಆಲಿಸಿದರು. ಭಾರತದಲ್ಲಿ ಸುಮಾರು 90 ಲಕ್ಷ ಟ್ರಕ್ ಚಾಲಕರಿದ್ದಾರೆ.ಅವರಿಗೆ ಅವರದೇ ಅದ ಕಷ್ಟಗಳಿವೆ.ಅವರ ಮನ್‌ಕೀ ಬಾತ್ ಕೇಳುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಹೇಳಿಕೊಂಡಿದೆ.