ರಾಹುಲ್ ಅಜ್ಜಿ ಇಂದಿರಾ ಗಾಂಧಿ ಕೂಡ 50 ವರ್ಷಗಳ ಹಿಂದೆ ಲೋಕಸಭೆಯಿಂದ ಅನರ್ಹರಾಗಿದ್ದರು!;ಯಾಕೆ? ಏನಿದು ಇತಿಹಾಸ..

ನವದೆಹಲಿ:ಸೂರತ್ ಹೈಕೋರ್ಟ್ ನ ಜೈಲು ಶಿಕ್ಷೆ ತೀರ್ಪಿನ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗಿದೆ.ಆದರೆ ಅನರ್ಹತೆ ಶಿಕ್ಷೆ ಗಾಂಧಿ ಕುಟುಂಬಕ್ಕೆ ಇದು ಮೊದಲಲ್ಲ.

ಐವತ್ತು ವರ್ಷಗಳ ಹಿಂದೆ ರಾಹುಲ್ ಗಾಂಧಿ ಅವರ ಅಜ್ಜಿ ಮತ್ತು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು 1971ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮದಲ್ಲಿ ಅಪರಾಧಿ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ನಂತರ ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು.

ರಾಯ್ ಬರೇಲಿಯಲ್ಲಿ ಇಂದಿರಾ ಗಾಂಧಿ ಸೋಲಿಸಿದ್ದ ರಾಜ್ ನಾರಾಯಣ್ ಅವರು ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ಮಾರ್ಗ ಬಳಸಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ ನಂತರ ಜೂನ್ 12,1975 ರಂದು ಮಹತ್ವದ ಹೈಕೋರ್ಟ್ ತೀರ್ಪು ಬಂದಿತ್ತು.

ಮೊದಲ ಬಾರಿಗೆ ಹಾಲಿ ಭಾರತೀಯ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಸ್ವತಃ ಹೈಕೋರ್ಟ್ನಲ್ಲಿ ಪರೀಕ್ಷೆಗೆ ಒಳಗಾಗಿದ್ದರು.

ಜಡ್ಜ್ ಗಳಾದ ಕಿಶೋರ್, ನ್ಯಾಯಮೂರ್ತಿ ಜಗಮೋಹನ್ ಲಾಲ್ ಸಿನ್ಹಾ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸರ್ಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪ್ರಧಾನಿ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದರು.ಇದರಿಂದ ಅಂದು ಇಂದಿರಾಗಾಂಧಿ ಸಂಸತ್ ಸ್ಥಾನಕ್ಕೆ ಅನರ್ಹತೆಗೆ ಒಳಗಾಗಿದ್ದರು.

ಟಾಪ್ ನ್ಯೂಸ್