ಕರ್ನಾಟಕದಲ್ಲಿ ದ್ವೇಷದ ಮಾರುಕಟ್ಟೆ ಮುಚ್ಚಿದೆ, ಪ್ರೀತಿಯ ಅಂಗಡಿಗಳು ತೆರೆದಿವೆ-ಕಾಂಗ್ರೆಸ್ ಗೆಲುವಿನ ಬಗ್ಗೆ ರಾಹುಲ್ ಗಾಂಧಿ ಏನೆಲ್ಲಾ ಹೇಳಿದ್ರು?

ಬೆಂಗಳೂರು;ಕರ್ನಾಟಕ ವಿಧಾನ ಸಭಾ ಚುನಾವಣೆಯ ಕಾಂಗ್ರೆಸ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ದ್ವೇಷದ ಮಾರುಕಟ್ಟೆ ಮುಚ್ಚಿದೆ, ಪ್ರೀತಿಯ ಅಂಗಡಿಗಳು ತೆರೆದಿವೆ ಎಂದು ಹೇಳಿದ್ದಾರೆ.

ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ,ನಾನು ಮೊದಲು ಕರ್ನಾಟಕದ ಜನತೆಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ. ಕನಕ ನಾವು ಕರ್ನಾಟಕದಲ್ಲಿ ದ್ವೇಷದಿಂದ ಹೋರಾಡಿಲ್ಲ, ಹೃದಯದಿಂದ ಹೋರಾಡಿದ್ದೇವೆ. ದ್ವೇಷದ ಮುಂದೆ ಪ್ರೀತಿ ಗೆಲ್ಲುತ್ತದೆ, ಗೆದ್ದಿದೆ ಎಂದು ಹೇಳಿದ್ದಾರೆ.

ನಾವು ಬಡವರ ಜತೆ ನಿಂತಿದ್ದೆವು. ಇದು ಎಲ್ಲರ ಗೆಲವು. ಇದು ಕರ್ನಾಟಕದ ಜನರ ಗೆಲುವು. ನಾವು 5 ಗ್ಯಾರಂಟಿ ಭರವಸೆಗಳನ್ನು ನೀಡಿದ್ದೆವು. ನಾವು ಆ ಭರವಸೆಗಳನ್ನು ವಿಧಾನಸಭೆ ಕಲಾಪದ ಮೊದಲ ದಿನವೇ ಜಾರಿಗೆ ತರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರೀತಿಯಿಂದಲೇ ನಾವು ದ್ವೇಷವನ್ನು ಕಿತ್ತು ಹಾಕಿದ್ದೇವೆ. ಇದು ಇತರ ಎಲ್ಲ ರಾಜ್ಯಗಳಲ್ಲಿಯೂ ಸಂಭವಿಸುತ್ತದೆ ಎಂದು ಹೇಳಿದರು.

ಹೊಸ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪಕ್ಷದ ಭರವಸೆಗಳನ್ನು ಈಡೇರಿಸಲಾಗುವುದು. ಒಂದೆಡೆ ಕ್ರೋನಿ ಕ್ಯಾಪಿಟಲಿಸಂನ ಬಲವಿತ್ತು, ಮತ್ತೊಂದೆಡೆ ಬಡವರ ಬಲವಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಟಾಪ್ ನ್ಯೂಸ್

ಹಿಂದೂ ಯುವತಿಯನ್ನು “ಕೇರಳ ಸ್ಟೋರಿ” ವೀಕ್ಷಿಸಲು ಕರೆದೊಯ್ದ ಸಂಸದೆ ಪ್ರಜ್ಞಾ ಸಿಂಗ್; ಆಕೆ ಸಿನಿಮಾ ನೋಡಿದ ಮರುದಿನವೇ ತನ್ನ ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿ!- ವರದಿ

ಭೋಪಾಲ್‌; 19 ವರ್ಷದ ಹಿಂದೂ ಸಮುದಾಯದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ನಿಗದಿಯಾಗಿದ್ದ ಮದುವೆಗೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com