ಸ್ಕೂಟರ್ ನಿಂದ ಬಿದ್ದ ವ್ಯಕ್ತಿಯ ಸಹಾಯಕ್ಕೆ ತೆರಳಿದ ರಾಹುಲ್ ಗಾಂಧಿ; ವಿಡಿಯೋ ವೈರಲ್..

ನವದೆಹಲಿ:ಸ್ಕೂಟರ್‌ನಿಂದ ಬಿದ್ದ ವ್ಯಕ್ತಿಯನ್ನು ಕಂಡು ಕಾರು ನಿಲ್ಲಿಸಿ ರಾಹುಲ್ ಗಾಂಧಿ ಆತನ ನೆರವಿಗೆ ಧಾವಿಸಿ ಸುದ್ದಿಯಾಗಿದ್ದಾರೆ.

ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿ ಸಂಸತ್ತಿಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಸ್ಕೂಟರ್‌ನಿಂದ ಬಿದ್ದ ವ್ಯಕ್ತಿಯನ್ನು ಕಂಡು ಕಾರು ನಿಲ್ಲಿಸಲು ಸೂಚಿಸಿದ್ದಾರೆ.ಬಳಿಕ ಕಾರಿನಿಂದ ಇಳಿದು ನೆರವಿಗೆ ಬಂದಿದ್ದಾರೆ.ಬಳಿಕ ಸವಾರನ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.

ಈ ಘಟನೆಯ ವಿಡಿಯೋವನ್ನು “ಜನನಾಯಕ್ ” ಎಂಬ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಕುರಿತ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗಿದೆ.

ಟಾಪ್ ನ್ಯೂಸ್