ಬೆಂಗಳೂರು;ಕರ್ನಾಟಕ ಚುನಾವಣೆಗೆ ಬಹಿರಂಗ ಪ್ರಚಾರ ಇಂದು ಮುಕ್ತಾಯಗೊಳ್ಳಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿನ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಸೋಮವಾರ ಬೆಳಗ್ಗೆ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕೆಫೆ ಕಾಫಿ ಡೇ ಔಟ್ ಲೆಟ್‌ಗೆ ಭೇಟಿ ನೀಡಿದ ರಾಹುಲ್ ಗಾಂಧಿ ಗ್ರಾಹಕರೊಂದಿಗೆ ಮಾತನಾಡಿದರು.
ನಂತರ ಬಿಎಂಟಿಸಿ ಬಸ್ ಹತ್ತಿದ ರಾಹುಲ್ ಗಾಂಧಿ ಕನ್ನಿಂಗ್ ಹ್ಯಾಮ್ ರಸ್ತೆಯಿಂದ ಲಿಂಗರಾಜಪುರಂಗೆ ಪ್ರಯಾಣಿಸುತ್ತಿದ್ದರು. ಬಸ್ಸಿನಲ್ಲಿದ್ದ ಕೆಲವು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿತು.ರಾಹುಲ್ ಗೆ ಕಂಡು ಪ್ರಯಾಣಿಕರು ಅಚ್ಚರಿಯಾಗಿದ್ದಾರೆ.
ನಿನ್ನೆ ಬೆಂಗಳೂರಿಗೆ ಆಗಮಿಸಿದ ರಾಹುಲ್ ಅವರು ಡೆಲಿವರಿ ಏಜೆಂಟ್‌ನ ಸ್ಕೂಟರ್ ನ್ನು ಹತ್ತಿಕೊಂಡು ರೈಡ್ ಮಾಡಿದ್ದರು.
ಡೆಲಿವರಿ ನೌಕರರ ಗುಂಪನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ರಾಹುಲ್ ಗಾಂಧಿ ಜಿ ಅವರು ಇಂದು ಬೆಂಗಳೂರಿನ ಐಕಾನಿಕ್ ಏರ್‌ಲೈನ್ಸ್ ಹೋಟೆಲ್‌ನಲ್ಲಿ ಡೆಲೆವರಿ ನೌಕರರು ಮತ್ತು ಡಂಜೊ, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಇತ್ಯಾದಿ ಕಂಪನಿಗಳ ವಿತರಣಾ ಪಾಲುದಾರರೊಂದಿಗೆ ಸಂಭಾಷಣೆ ನಡೆಸಿದ್ದರು.ರಾಹುಲ್ ಗಾಂಧಿಯವರು ಕಾಫಿ ಮತ್ತು ಮಸಾಲಾ ದೋಸೆಯ ಸೇವಿಸುವ ಮೂಲಕ ಕೆಲಸಗಾರರ ಜೊತೆ ಸಂವಾದ ನಡೆಸಿದ್ದರು.
Rahul Gandhi Ji travelled in local bus of Bangalore and interacted with passengers. pic.twitter.com/sfZu7mJ80F
— Shantanu (@shaandelhite) May 8, 2023