ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

-ರವುಫ್ ಮಹಮ್ಮದ್ ರಫೀಕ್ ಮೃತ ಬಾಲಕ

ದಾಂಡೇಲಿ; ಗೆಳೆಯರೊಂದಿಗೆ ಈಜಲು ತೆರಳಿದ್ದ ಬಾಲಕ ನೀರನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಾಂಡೇಲಿ ನಗರ ಸಮೀಪದಲ್ಲಿರುವ ಸಂಗಮ್ ಮಾಳಂಗಿಯಲ್ಲಿರುವ ಕಾಳಿ ನದಿಯಲ್ಲಿ ನಡೆದಿದೆ.

ಹಳೆದಾಂಡೇಲಿಯ ರವುಫ್ ಮಹಮ್ಮದ್ ರಫೀಕ್ (15) ಮೃತಪಟ್ಟ ಬಾಲಕ.

ರಫೀಕ್ ಗೆಳೆಯರೊಂದಿಗೆ ಸಂಗಮ್ ಮೌಳಂಗಿಗೆ ತೆರಳಿ ಅಲ್ಲಿಂದ ಕಾಳಿ ನದಿಯಲ್ಲಿ ಈಜಲು ತೆರಳಿದ್ದಾನೆ. ಈ ಸಮಯದಲ್ಲಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ.

ನದಿಯಲ್ಲಿ ಮುಳುಗಿದ್ದ ಬಾಲಕನಿಗೆ ತಕ್ಷಣ ಮೀನು ಹಿಡಿಯಲುತ್ತಿದ್ದವರು ರಕ್ಷಿಸಲು ಪ್ರಯತ್ನಿಸಿದ್ದಾರೆ.ಆದರೆ ಬಾಲಕ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

ಘಟನೆ ನಡೆದ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದಾರೆ.ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಗಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರ, ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.ಹಳೆದಾಂಡೇಲಿಯ ಬಾಡಿಗೆ ಮನೆಯೊಂದರಲ್ಲಿ ತಾಯಿ, ತಮ್ಮ ಮತ್ತು ತಂಗಿಯ ಜೊತೆ ವಾಸವಿದ್ದ ಈ ಬಾಲಕ ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್