ಬಿಸಿಲಿಗೆ ಅಸ್ವಸ್ಥಗೊಂಡು ಯುವತಿ ಸಾವು! ಶಾಕಿಂಗ್ ಸುದ್ದಿ…

ಬಿಸಿಲಿಗೆ ಅಸ್ವಸ್ಥಗೊಂಡು ಯುವತಿ ಸಾವು! ಶಾಕಿಂಗ್ ಸುದ್ದಿ…

ಬಳ್ಳಾರಿ;ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದ ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣಾ ವಿಭಾಗದ ಡಿ ಗ್ರೂ‍ಪ್‌ ಸಿಬ್ಬಂದಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಸಿರುಗುಪ್ಪದ ನಿವಾಸಿ ರತ್ನ(31) ಪ್ರತಿನಿತ್ಯ ಬಳ್ಳಾರಿಗೆ ಬಂದು ಹೋಗುತ್ತಿದ್ದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಜಾಥಾದಲ್ಲಿ ಭಾಗವಹಿಸಿದ್ದರು. ಜಾಥಾದಿಂದ ಹಿಂತಿರುಗಿದ ಬಳಿಕ ಅವರಿಗೆ ಅಪಸ್ಮಾರ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಹಿಳೆ ಜಾಥಾ ಮಧ್ಯದಲ್ಲೇ ನಿರ್ಗಮಿಸಿದರು. ಸಹೊದ್ಯೋಗಿಗಳ ಜತೆ ಮಾತನಾಡುತ್ತಾ ಕುಳಿತಾಗ ಅಸ್ವಸ್ಥರಾದರು.ತಕ್ಷಣ ಆಂಬುಲೆನ್ಸ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.ಅಷ್ಟರಲ್ಲಿ ಮೃತಪಟ್ಟಿದ್ದರು ಎಂದು ವರದಿಯಾಗಿದೆ.

ಮಹಿಳೆ ಸಾವಿಗೆ ನಿಖರ ಕಾರಣ ತಿಳಿದಿಲ್ಲ. ಬಿಸಿಲಿನ ಬೇಗೆಗೆ ಅಸ್ವಸ್ಥಗೊಂಡು ಮೃತಪಟ್ಟ ಬಗ್ಗೆ ಶಂಶಯ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿದು ಬರಬೇಕಿದೆ.

ಟಾಪ್ ನ್ಯೂಸ್