ನಿಖಾಹ್ ಆಗಿ 10 ದಿನ ಸಂಸಾರ ಮಾಡಿ ವಧುವಿನ ಚಿನ್ನಾಭರಣದ ಜೊತೆ ಪರಾರಿಯಾಗುತ್ತಿದ್ದ ಆರೋಪಿ ಅರೆಸ್ಟ್; ಹಲವು ಯುವತಿಯರಿಗೆ ವಂಚಿಸಿದ ರಶೀದ್, ರಾಜ್ಯದ ಎಲ್ಲಾ ಠಾಣೆಗಳಿಗೂ ಈತನ ಬಗ್ಗೆ ಮಾಹಿತಿ ರವಾನೆ…
ಕಲ್ಪೆಟ್ಟ: ಮದುವೆ ಬಳಿಕ ಮಹಿಳೆಯರಿಂದ ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ರಶೀದ್ (41) ಎಂದು ಗುರುತಿಸಲಾಗಿದೆ. ಈತ ಚಿನ್ನಾಭರಣ ದೋಚಲೆಂದೇ ಮದುವೆ ಆಗುತ್ತಿದ್ದ.
ಇತ್ತೀಚೆಗಷ್ಟೇ ವಿವಾಹವಾದ ಮಾನಂತವಾಡಿಯ ಪಿಲಕಾವುನಲ್ಲಿರುವ ವಧುವಿನ ಮನೆಯಲ್ಲಿ ವಾಸವಿದ್ದ ವೇಳೆ ವೈತಿರಿ ಪೊಲೀಸರು ರಶೀದ್ನನ್ನು ಬಂಧಿಸಿದ್ದಾರೆ.
ಈತ ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಿವಾಹವಾಗುತ್ತಿದ್ದ.ಮದುವೆಯಾದ ಕೆಲವು ತಿಂಗಳ ನಂತರ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ.
ಈತ ಇದೇ ರೀತಿ 10 ಮದುವೆಯಾಗಿ ವಂಚಿಸಿದ್ದಾನೆ ಎನ್ನಲಾಗಿದೆ.ಆರೋಪಿಯ ಬಗ್ಗೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದೆ.ಆತನ ವಿರುದ್ಧ ಇದೇ ರೀತಿಯ ಇತರ ಪ್ರಕರಣಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.