ಬಡ ರೈತನ ಐವರು ಹೆಣ್ಣುಮಕ್ಕಳು ಕೂಡ ಉನ್ನತ ಶ್ರೇಣಿಯ ಅಧಿಕಾರಿಗಳು!; ಎಲ್ಲರ ಗಮನಸೆಳೆದ ಕುಟಂಬ!

ಹೆಣ್ಣು ಭ್ರೂಣ ಹತ್ಯೆ ಮತ್ತು ಬಾಲ್ಯವಿವಾಹಗಳಿಗೆ ಕುಖ್ಯಾತವಾಗಿರುವ ರಾಜ್ಯದಲ್ಲಿ, ರೈತನ ಎಲ್ಲಾ ಐವರು ಹೆಣ್ಣುಮಕ್ಕಳು ರಾಜಸ್ಥಾನದ ಆಡಳಿತ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅವರ ಯಶಸ್ಸಿನ ಹಿಂದಿನ ರಹಸ್ಯ, ಅವರ ಪ್ರಗತಿಪರ ತಂದೆ ಎಂದು ಅವರು ಹೇಳುತ್ತಾರೆ.

ಸಹದೇವ್ ಸಹರಾನ್ ಮತ್ತು ಅವರ ಅನಕ್ಷರಸ್ಥ ಪತ್ನಿ ಲಕ್ಷ್ಮಿ, ಐದು ಹೆಣ್ಣುಮಕ್ಕಳ ಪೋಷಕರು. ರಾಜಸ್ಥಾನದ ಹನುಮಾನ್‌ಗಢ್ ಜಿಲ್ಲೆಯ ಭೇರುಸರಿ ಎಂಬ ಸಣ್ಣ ಹಳ್ಳಿಯಿಂದ ಬಂದವರು. ವೃತ್ತಿಯಲ್ಲಿ ಕೃಷಿಕರಾಗಿರುವ ಸಹದೇವ್ ಜೀವನ ನಿರ್ವಹಣೆಗೆ ಕೃಷಿಯನ್ನೇ ಅವಲಂಬಿಸಿದ್ದರು.ಆದರೆ ನಿರಂತರ ನೀರು ನಿಲ್ಲುವುದರಿಂದ ಅವರ ಜಮೀನಿನಲ್ಲಿ ಉತ್ತಮ ಇಳುವರಿ ಪಡೆಯುವುದು ಕಷ್ಟಕರವಾಗಿತ್ತು.

ಆದರೆ ಅವರ ಕಳಪೆ ಆರ್ಥಿಕ ಪರಿಸ್ಥಿತಿಗಳು ತಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಲು ಬಿಡಲಿಲ್ಲ. ಹುಡುಗಿಯರನ್ನು ಶಾಲೆಗೆ ಕಳುಹಿಸಲು ಅವರಿಗೆ ಸಾಧ್ಯವಾಗದಿದ್ದರೂ, ಅವರು ಮನೆಯಲ್ಲಿ ಅವರಿಗೆ ಕಲಿಸಿದರು ಮತ್ತು ದೊಡ್ಡ ಕನಸು ಕಾಣುವಂತೆ ಪ್ರೋತ್ಸಾಹಿಸಿದರು.

ತಮ್ಮ ಪದವಿಯ ನಂತರ, ಹಿರಿಯ ಸಹೋದರಿಯರಾದ ರೋಮಾ ಮತ್ತು ಮಂಜು ರಾಜಸ್ಥಾನ ಆಡಳಿತ ಸೇವೆ (RAS) ಪರೀಕ್ಷೆಗೆ ತಯಾರಿ ಆರಂಭಿಸಿದರು. ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಪರೀಕ್ಷೆಯನ್ನು ನಡೆಸಲಾಗುತ್ತದೆ.
ತಂದೆಯ ಕನಸನ್ನ ನನಸಾಗಿಸುವ ಗುರಿಯೊಂದಿಗೆ ಅವರು ಅಧ್ಯಯನ ಮಾಡಿದರು. 2010 ರಲ್ಲಿ ರೋಮಾ ಅವರ ಕುಟುಂಬದಲ್ಲಿ ಮೊದಲ RAS ಅಧಿಕಾರಿಯಾದರು. ನಂತರ 2017ರಲ್ಲಿ ಮಂಜು ಕೂಡ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಇಬ್ಬರು ಹಿರಿಯ ಸಹೋದರಿಯರ ಯಶಸ್ಸಿನಿಂದ ಸ್ಫೂರ್ತಿಗೊಂಡ ಕಿರಿಯ ಸಹೋದರಿಯರಾದ ಅಂಶು, ರಿತು ಮತ್ತು ಸುಮನ್ ಕೂಡ ರಾಜಸ್ಥಾನದ ಆಡಳಿತ ಸೇವೆಗೆ ತಯಾರಿ ಆರಂಭಿಸಿದರು.

2018ರಲ್ಲಿ RAS ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅಂಶು, ರಿತು ಮತ್ತು ಸುಮನ್ ರಾಜಸ್ಥಾನದ ಆಡಳಿತ ಸೇವೆಗೆ ಏಕಕಾಲದಲ್ಲಿ ಆಯ್ಕೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com