ರಾತ್ರಿ ವೇಳೆ ಕದ್ದು ಮುಚ್ಚಿ ಗೆಳತಿಯನ್ನು ಭೇಟಿಗೆ ಬಂದ ಯುವಕನಿಗೆ ಹಿಡಿದು ವಿವಾಹ ಮಾಡಿಸಿದ ಗ್ರಾಮಸ್ಥರು, ಯುವಕ ಹೈಡ್ರಾಮ ಮಾಡಿ ತಪ್ಪಿಸಿಕೊಳ್ಳಲು ಯತ್ನ!

ಬಿಹಾರ;ಯುವಕನೋರ್ವ ರಾತ್ರಿ ವೇಳೆ ತನ್ನ ಗೆಳತಿಯನ್ನು ಯಾರಿಗೂ ಕಾಣದಂತೆ ಭೇಟಿಯಾಗಲು ಆಕೆಯ ಮನೆಗೆ ಹೋಗಿ ಸಿಕ್ಕಿಬಿದ್ದಿದ್ದಾನೆ.ಕೊನೆಗೆ ಈ ಪ್ರೇಮದಾಟ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆಯೊಂದಿಗೆ ಕೊನೆಗೊಂಡಿದೆ.

ಚನ್ಪಾಟಿಯಾ ಬ್ಲಾಕ್ ನಲ್ಲಿರುವ ಗಿಡ್ಡಾ ಪಂಚಾಯತ್​ನ ರಂಜನ್ ಕುಮಾರ್ ಯಾದವ್, ಲೌಕರಿಯಾ ಗ್ರಾಮದ ಊರ್ಮಿಳಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ರಂಜನ್ ತನ್ನ ಲವರ್ ಗೆ​ ಭೇಟಿಯಾಗಲು ಗೌಪ್ಯವಾಗಿ
ರಾತ್ರಿ ವೇಳೆ ಬರುತ್ತಿದ್ದ.

ಇದೀಗ ಜೋಡಿಯನ್ನು ಬಾಲಕಿಯ ಕುಟುಂಬಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೊನೆಗೆ ಗ್ರಾಮಸ್ಥರೊಂದಿಗೆ ಸೇರಿ ಯುವತಿಯ ಕುಟುಂಬಸ್ಥರು ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ.

ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಾಗ ರಂಜನ್​ ತಾನು ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಅಲ್ಲದೆ ರಂಜನ್ ಕುಮಾರ್ ಯಾದವ್ ಹೇಗಾದರೂ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಗಲಾಟೆ ಶಬ್ದಕ್ಕೆ ಸಾಕಷ್ಟು ಜನ ಸೇರಿದ್ದಾರೆ. ಕೊನೆಗೆ ಯುವತಿ ಹಾಗೂ ಯುವಕನನ್ನು ಹಿಡಿದು ಚನ್ಪಾಟಿಯಾ ಠಾಣೆಗೆ ಕರೆದೊಯ್ದು ಒಪ್ಪಿಸಿದ್ದಾರೆ.

ರಂಜನ್ ಕುಮಾರ್ ಯಾದವ್ ಮತ್ತು ಊರ್ಮಿಳಾ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗಲು ಬಯಸುವುದಾಗಿ ಪೊಲೀಸರು ಲಿಖಿತ ಭರವಸೆ ಪಡೆದಿದ್ದಾರೆ. ಪ್ರೇಮವಿವಾಹದ ವಿಚಾರವಾಗಿ ಪ್ರಿಯಕರ ಹಾಗೂ ಯುವತಿಗೆ ಪೊಲೀಸರು ಕೌನ್ಸಿಲಿಂಗ್ ಮಾಡಿದ್ದಾರೆ.

ಇದೇ ವೇಳೆ ಯುವತಿಯನ್ನು ಭೇಟಿಯಾಗಲು ಬಂದ ಯುವಕ ಪ್ರೇಮ ಮದುವೆಯಾಗು ಎಂದು ಹೇಳಿದಾಗ ಏನೇನೋ ನಾಟಕ ಮಾಡಲು ಶುರು ಮಾಡಿದ್ದಾನೆ. ಹಾಗಾಗಿ ಯುವತಿಯ ಸಂಬಂಧಿಕರು ಆತನನ್ನು ಚೌರಾಹಿಯಾ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಯುವತಿಯನ್ನು ಮದುವೆಯಾಗುತ್ತೇನೆ ಎಂದು ಯುವಕನಿಂದ ಲಿಖಿತ ವಾಗ್ದಾನ ಪಡೆದಿದ್ದಾರೆ.

ಮರುದಿನ ಗ್ರಾಮಸ್ಥರ ಸಹಾಯದಿಂದ ಯುವತಿಯ ಕುಟುಂಬ ಸದಸ್ಯರು ರಂಜನ್ ಕುಮಾರ್ ಯಾದವ್ ಮತ್ತು ಊರ್ಮಿಳಾಗೆ ಶಿವ ದೇವಾಲಯದಲ್ಲಿ
ವಿವಾಹ ಮಾಡಿಸಿದ್ದಾರೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com