ಹಾವೇರಿ;ಮಗಳನ್ನು ವಿದೇಶಕ್ಕೆ ಕಳುಹಿಸಿ ಮನೆಗೆ ಹಿಂತಿರುಗುತ್ತಿದ್ದ ತಾಯಿ ಕಾರು ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ರಾಣೇಬೆನ್ನೂರು ಬಳಿ ನಡೆದಿದೆ.
ಜಯಂತಿ (50) ಮೃತ ದುರ್ದೈವಿ.ಘಟನೆಯಲ್ಲಿ ಕಾರು ಚಾಲಕ ವಿಠ್ಠಲ್ (47)ಎಂಬವರು ಕೂಡ ಮೃತಪಟ್ಟಿದ್ದಾರೆ.
ಜಯಂತಿ ಅವರು ತಮ್ಮ ಮಗಳನ್ನು ದುಬೈ ಕಳುಹಿಸಲು ಬೆಂಗಳೂರಿನ ಏರ್ ಪೋರ್ಟ್ ಗೆ ಬಂದಿದ್ದರು.ಮಗಳನ್ನು ವಿಮಾನವೇರಿಸಿ ಶಿರಸಿಗೆ ವಾಪಸ್ಸಾಗುತ್ತಿದ್ದಾಗ ರಾಣೇಬೆನ್ನೂರು ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ನಿರಂತರವಾಗಿ ಕಾರು ಚಾಲನೆ ಮಾಡಿರುವ ಹಿನ್ನೆಲೆ ನಿದ್ದೆ ಕಣ್ಣಿನಲ್ಲಿ ಕಾರಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಮಾಹಿತಿ ತಿಳಿದ ಕೂಡಲೇ ಹಲಗೇರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.