ರಾಂಚಿಯಲ್ಲಿ ಪ್ರವಾದಿ ನಿಂದನೆ ವಿರುದ್ಧದ ಪ್ರತಿಭಟನೆ ವೇಳೆ ಘರ್ಷಣೆ; ಪೊಲೀಸ್ ಫೈರಿಂಗ್ ಗೆ ಅಪ್ರಾಪ್ತ ಬಾಲಕ ಸೇರಿ ಇಬ್ಬರು ಸಾವು, ಹಲವರಿಗೆ ಗುಂಡೇಟು

ರಾಂಚಿ;ಪ್ರವಾದಿ ನಿಂದನೆ ವಿರುದ್ಧ ಝಾರ್ಖಾಂಡ್ ನ‌ ರಾಂಚಿಯಲ್ಲಿ ಜನಾಕ್ರೋಶ ಭುಗಿಲೆದ್ದಿದ್ದು‌ ಫೈರಿಂಗ್ ನಲ್ಲಿ ಅಪ್ರಾಪ್ತ ಬಾಲಕ ಸೇರಿ‌ ಇಬ್ಬರು ಯುವಕರು‌ ಮೃತಪಟ್ಟ ಘಟನೆ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿದೆ.

ಘಟನೆಯಲ್ಲಿ ಪೊಲೀಸರು ಸೇರಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ನೂಪುರ್ ಶರ್ಮಾ ಪ್ರವಾದಿ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ಮುಂದುವರಿದಿದೆ. ಇದರ ಬೆನ್ನಲ್ಲೇ ರಾಂಚಿಯಲ್ಲಿ ಬಾರೀ ಉದ್ವಿಗ್ನಕ್ಕೆ ಕಾರಣವಾಗಿದೆ.

ನೂಪುರ್ ಶರ್ಮಾ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ‌. ಈ ವೇಳೆ ಕಲ್ಲು ತೂರಾಟ ನಡೆದು ಬಳಿಕ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ರಾಂಚಿಯ ರೈನ್ ಮಸ್ಜಿದ್ ಹಿಂದ್ ಪುರಿ ನಿವಾಸಿ ಮುದಸ್ಸರ್ (16) ಮತ್ತು ಕರ್ಬಲಾ ಟ್ಯಾಂಕ್ ರಸ್ತೆಯ ಚಿಸ್ತಿ ಮೊಹಲ್ಲಾ ನಿವಾಸಿ ಶಾಹಿಲ್ ಅಫ್ಝಲ್ ಪೊಲೀಸರ ಗುಂಡಿಗೆ ಬಲಿಯಾದವರು

ರಾಂಚಿ ಮೈನ್ ರಸ್ತೆಯ ಹನುಮಾನ್ ಮಂದಿರದ ಬಳಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಬಳಿಕ ಕರ್ಫ್ಯೂ ಹೇರಲಾಗಿದೆ.

ಟಾಪ್ ನ್ಯೂಸ್