ಭೀಕರ ಅಪಘಾತ; ಮಾಜಿ ಕ್ರಿಕೆಟಿಗನಿಗೆ ಗಂಭೀರ ಗಾಯ, ಪತ್ನಿ ಸಾವು

ಮಹಾರಾಷ್ಟ್ರ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಮಾಜಿ ರಣಜಿ ಕ್ರಿಕೆಟಿಗ ಪ್ರವೀಣ್ ಹಿಂಗ್ನಿಕರ್ ಗಾಯಗೊಂಡಿದ್ದು, ಅವರ ಪತ್ನಿ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಬಳಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಮಾಜಿ ರಣಜಿ ಕ್ರಿಕೆಟಿಗ ಮತ್ತು ಕೋಚ್ ಪ್ರವೀಣ್ ಹಿಂಗ್ನಿಕರ್ ಅವರು ಗಾಯಗೊಂಡಿದ್ದು, ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಗಾಯಗೊಂಡ ಹಿಂಗ್ನಿಕರ್ ಅವರನ್ನು ಚಿಕಿತ್ಸೆಗಾಗಿ ಮೆಹಕರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಧ್ಯಾಹ್ನ ದಂಪತಿ ಪುಣೆಯಲ್ಲಿರುವ ತಮ್ಮ ಮಗನ ಮನೆಗೆ ಭೇಟಿ ನೀಡಿ ಪುಣೆಯಿಂದ ನಾಗ್ಪುರಕ್ಕೆ ತೆರಳುತ್ತಿದ್ದಾಗ ಅವರ ಕಾರು ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ದಂಪತಿ ಪುಣೆಯಿಂದ ನಾಗಪುರಕ್ಕೆ ತೆರಳುವ ರಸ್ತೆಯ ಮಧ್ಯೆ ಈ ಅಪಘಾತ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್