ಯುಎಇ; ರಂಜಾನ್ ಹಿನ್ನೆಲೆ ವಿಶ್ವಾದ್ಯಂತ 1.9 ಶತಕೋಟಿ ಮುಸ್ಲಿಮರು ಪವಿತ್ರ ತಿಂಗಳ ಆಚರಣೆ ಮಾಡುತ್ತಿದ್ದಾರೆ. ರಂಝಾನ್ ಹಿನ್ನೆಲೆ ಯುಎಇ ಅಧ್ಯಕ್ಷ ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಜೈಲಿನಿಂದ 1,025 ಕೈದಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.
ಕ್ಷಮಾಪನೆ ಪಡೆದ ಕೈದಿಗಳಿಗೆ ವಿವಿಧ ಅಪರಾಧಗಳಿಗಾಗಿ ಜೈಲು ಶಿಕ್ಷೆ ವಿಧಿಸಲಾಗಿತ್ತು.ಯುಎಇಯ ಪ್ರತಿಯೊಂದು ಎಮಿರೇಟ್‌ಗಳ ಆಡಳಿತಗಾರರು ಮಹತ್ವದ ಇಸ್ಲಾಮಿಕ್ ಆಚರಣೆ ರಂಝಾನ್ ವೇಳೆ ಕೈದಿಗಳಿಗೆ ಕ್ಷಮೆ ನೀಡುವುದು ಸಾಮಾನ್ಯವಾಗಿದೆ.
ಅಧ್ಯಕ್ಷರ ಕ್ಷಮಾದಾನವು ಬಿಡುಗಡೆಯಾದ ಕೈದಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಮರುಚಿಂತನೆ ಮಾಡಲು ಅವಕಾಶವನ್ನು ನೀಡುತ್ತದೆ ಮತ್ತು ಯಶಸ್ವಿ ಸಾಮಾಜಿಕ ಮತ್ತು ವೃತ್ತಿಪರ ಜೀವನವನ್ನು ನಡೆಸಲು ಅವರ ಕುಟುಂಬಗಳು ಮತ್ತು ಸಮುದಾಯಗಳ ಸೇವೆಗೆ ಧನಾತ್ಮಕವಾಗಿ ಸ್ಪಂದಸಲು ಕೊಡುಗೆ ನೀಡುತ್ತದೆ ಎಂದು ವರದಿ ತಿಳಿಸಿದೆ.