ಬಾಲಿವುಡ್ ನಟಿ ರಾಖಿ ಸಾವಂತ್ ರಂಝಾನ್ ಹಿನ್ನೆಲೆ ಉಪವಾಸ ವೃತ ಆಚರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಈ ಮೊದಲು ಮೈಸೂರಿನ ಯುವಕ ಆದಿಲ್ ಖಾನ್ ಗೆ ಮದುವೆಯಾಗಿ ಬಳಿಕ ರಾಖಿ ಸಾವಂತ್ ತನ್ನ ಪತಿಯ ಜೊತೆಗಿನ ಜಗಳದ ವಿಡಿಯೋ ಹಂಚಿಕೊಂಡಿದ್ದರು.
ಕೊನೆಗೆ ಆದಿಲ್ ಖಾನ್ ಗೆ ಜೈಲಿಗೆ ಕೂಡ ಕಳುಹಿಸಿದ್ದಾರೆ.
ಈ ರಂಜಾನ್ ಸಮಯದಲ್ಲಿ ರಾಖಿ ಸಾವಂತ್ ಉಮ್ರಾಗೆ ಹೋಗುತ್ತೇನೆ ಎಂದಿದ್ದರು.ಪವಿತ್ರ ಉಮ್ರಾ ಯಾತ್ರೆ ನನ್ನ ಕನಸು ಎಂದು ಹೇಳಿದ್ದರು.
ಇದೀಗ ಮೊದಲ ಉಪವಾಸದ ವಿಡಿಯೋ ಇನ್ಸ್ಟಾ ಗ್ರಾಂ ನಲ್ಲಿ ಹರಿಯಬಿಟ್ಟ ರಾಖಿ ಸಾವಂತ್, ರೋಜಾವನ್ನು ಸರಿಯಾಗಿ ಮಾಡುತ್ತೇನೆ. ರಂಜಾನ್ ತಿಂಗಳು ಶುರುವಾದಾಗ ನಾನು ಒಂದು ತಿಂಗಳ ಕಾಲ ತುಂಬಾನೇ ಜಾಗರೂಕಳಾಗಿರುತ್ತೇನೆ. ಇಡೀ ದಿನ ಹಸಿವಿನಿಂದ ಇರಬೇಕು ಮತ್ತು ನಮಾಜ್ ಮಾಡಬೇಕಾಗುತ್ತದೆ, ಆದ್ದರಿಂದ ಜಿಮ್ ಗೆ ಹೋಗುವುದಿಲ್ಲ ಎಂದೂ ಹೇಳಿದ್ದಾರೆ.
ಹಿಜಾಬ್ ಧರಿಸಿ ತಮ್ಮ ಮೊದಲ ರೋಸಾದ ಅನುಭವವನ್ನು ರಾಖಿ ಹಂಚಿಕೊಂಡಿದ್ದಾರೆ.ವಿಡಿಯೋ ಹಂಚಿಕೊಳ್ಳುವಾಗ, ರಾಖಿ ಅದರ ಶೀರ್ಷಿಕೆಯಲ್ಲಿ ‘ನನ್ನ ಮೊದಲ ರೋಸಾ’ ಎಂದು ಬರೆದಿದ್ದಾರೆ. ವಿಡಿಯೋದಲ್ಲಿ ಅವರು, ‘ಎಲ್ಲರಿಗೂ ಸಲಾಮ್ ಹೇಳುತ್ತಾರೆ.ಇಂದು ನನ್ನ ಮೊದಲ ರೋಜಾ. ಮತ್ತು ನನ್ನನ್ನು ನಂಬಿರಿ 4 ಗಂಟೆಯಿಂದ ಉಪವಾಸವಿದ್ದೇನೆ. ಆದರೂ ನನಗೆ ಹಸಿವಾಗುತ್ತಿಲ್ಲ.ನಾನು ನಮಾಜ್ ಮಾಡುತ್ತಿದ್ದೇನೆ. ನಾನು ಪ್ರಾರ್ಥಿಸುತ್ತೇನೆ.ನಾನು ಒಳಗಿನಿಂದ ತುಂಬಾ ನಿರಾಳವಾಗಿದ್ದೇನೆ ಮತ್ತು ನಾನು ಇನ್ನೂ ಕಲಿಯುತ್ತಿದ್ದೇನೆ ಎಂದಿದ್ದಾರೆ.