ರಂಝಾನ್ ನ ಪ್ರಾರ್ಥನಾ ಸಭೆ‌ ನಡೆಸುತ್ತಿದ್ದವರನ್ನು ತಡೆದ ಬಜರಂಗದಳದ ಕಾರ್ಯಕರ್ತರು

ರಂಝಾನ್ ನ ಪ್ರಾರ್ಥನಾ ಸಭೆ‌ ನಡೆಸುತ್ತಿದ್ದವರನ್ನು ತಡೆದ ಬಜರಂಗದಳದ ಕಾರ್ಯಕರ್ತರು

ಉತ್ತರಪ್ರದೇಶ;ಮೊರಾದಾಬಾದ್ ನಗರದ ವೇರ್ ಹೌಸ್ ಒಂದರಲ್ಲಿ ರಂಜಾನ್ ಪ್ರಾರ್ಥನಾ ಸಭೆ ನಡೆಸುತ್ತಿದ್ದ ಮುಸ್ಲಿಮರನ್ನು ಹಿಂದುತ್ವ ಸಂಘಟನೆ ಬಜರಂಗದಳದ ಸದಸ್ಯರು ಶನಿವಾರ ತಡೆದಿದ್ದಾರೆ.

ಹಿಂದೂ ಬಹುಸಂಖ್ಯಾತ ಜನಸಂಖ್ಯೆ ಹೊಂದಿರುವ ನಗರದ ಲಜಪತ್ ನಗರ ಪ್ರದೇಶದ ನಿವಾಸಿಗಳಿಂದ ಪ್ರಾರ್ಥನಾ ಸಭೆಯ ಬಗ್ಗೆ ದೂರು ಸ್ವೀಕರಿಸಿದ್ದೇವೆ ಎಂದು ಮೊರಾದಾಬಾದ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲಿ ಸಭೆಯನ್ನು ಶನಿವಾರ ನಡೆಸಲು ಅನುಮತಿಸಲಾಗಿದೆ.ಆದರೆ ಈ ಪ್ರದೇಶದ ಮುಸ್ಲಿಮರು ತಮ್ಮ ಮನೆಗಳು ಅಥವಾ ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಕೇಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ತಮ್ಮ ವೇರ್ ಹೌಸ್ ನಲ್ಲಿ ಜಾಕೀರ್ ಎಂಬವರು ಪ್ರಾರ್ಥನಾ ಸಭೆಯನ್ನು ಆಯೋಜಿಸಿದ್ದರು.ಅಂತಹ ಯಾವುದೇ ಸಭೆಗಳನ್ನು ನಡೆಸವುದಿಲ್ಲ ಎಂದು ಪೊಲೀಸ್ ಠಾಣೆಗೆ ಲಿಖಿತ ಹೇಳಿಕೆಯನ್ನು ಸಲ್ಲಿಸಿದ್ದಾರೆ.

ಭವಿಷ್ಯದಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ತಪ್ಪಿಸಲು ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ ಪೊಲೀಸರು ಹುಸೇನ್ ಅವರನ್ನು ಕೇಳಿಕೊಂಡರು ಎಂದು ಮೊರಾದಾಬಾದ್ ಪೊಲೀಸ್ ಹಿರಿಯ ಅಧೀಕ್ಷಕ ಹೇಮರಾಜ್ ಮೀನಾ ತಿಳಿಸಿದ್ದಾರೆ.

“ನಮಾಜ್‌ಗೆ ಅವರ ಕುಟುಂಬ ಮಾತ್ರ ಸೇರುತ್ತದೆ ಎಂದು ಅವರು ಹೇಳಿದರು” ಎಂದು ಮೀನಾ ತಿಳಿಸಿದರು. “ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು ನಾವು ಕಾರ್ಯನಿರ್ವಹಿಸಿದ್ದೇವೆ ಆದರೆ ಕೆಲವರು ಅದನ್ನು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ರೀತಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ

ಪ್ರಾರ್ಥನಾ ಸಭೆಯನ್ನು ವಿರೋಧಿಸುವವರಿಗೆ ಮುಸ್ಲಿಮರು ತಮ್ಮ ಮನೆಯೊಳಗೆ ಪ್ರಾರ್ಥನೆ ಸಲ್ಲಿಸುವುದರಿಂದ ತೊಂದರೆಯಾಗಬಾರದು ಎಂದು ಪೊಲೀಸರು ಹೇಳಿದರು ಎಂದು ಮೀನಾ ಹೇಳಿದರು.

ಟಾಪ್ ನ್ಯೂಸ್