ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ಕೊಟ್ಟ ಬಾಬಾ ರಾಮ್ ದೇವ್

ರಾಜಸ್ಥಾನ;ಬಾರ್ಮರ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಯೋಗ ಗುರು ರಾಮ್‌ದೇವ್ ಅವರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಅವಹೇಳನಾಕಾರಿಯಾಗಿ ಭಾಷಣ ಮಾಡಿದ್ದಾರೆ.

ಈ ಕುರಿತು ಮುಸ್ಲಿಮರು ‘ನಮಾಜ್ ಮಾಡುತ್ತಾರೆ, ಜೊತೆಗೆ ಭಯೋತ್ಪಾದನೆ ಮಾಡುವಲ್ಲಿ ನಿರತರಾಗಿದ್ದರೆ, ಕ್ರಿಶ್ಚಿಯನ್ನರು ಧಾರ್ಮಿಕ ಮತಾಂತರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅವರು ಬಾರ್ಮರ್ ಜಿಲ್ಲೆಯಲ್ಲಿ ಜನಸಮೂಹವನ್ನುದ್ದೇಶಿಸಿ ಮಾತನಾಡುತ್ತಾ, ಇಸ್ಲಾಂ ಧರ್ಮದಲ್ಲಿ ವ್ಯಕ್ತಿಗಳಿಗೆ ನಮಾಜ್‌ ಮಾಡುವ ಬಗ್ಗೆ ಮಾತ್ರವೇ ಹೇಳಿಕೊಡಲಾಗುತ್ತದೆ. ಅವರು ಕೂಡ ನಮಾಜ್ ಮಾಡಿದ ಬಳಿಕ, ಎಂಥಾ ಪಾಪಗಳನ್ನು ಬೇಕಾದರೂ ಮಾಡುತ್ತಾರೆ. ದಿನಕ್ಕೆ 5 ಬಾರಿ ನಮಾಜ್‌ ಮಾಡಿದರೆ ಸಾಕು, ನೀನು ಹಿಂದು ಹುಡುಗಿಯ ಜೊತೆ ಏನ್‌ ಬೇಕಾದ್ರೂ ಮಾಡು, ಜಿಹಾದ್‌ ಹೆಸರಲ್ಲಿ ಟೆರರಿಸ್ಟ್‌ ಬೇಕಾದ್ರೂ ಆಗು, ನಿನ್ನ ತಲೆಯಲ್ಲಿ ಏನು ಮಾಡಬೇಕು ಅನಿಸುತ್ತೋ ಅದೆಲ್ಲವನ್ನೂ ಮಾಡಬಹುದು ಎಂದು ಬಾಬಾ ರಾಮ್‌ದೇವ್‌ ಹೇಳಿರುವ ಬಗ್ಗೆ ವರದಿಯಾಗಿದೆ‌.

ಟಾಪ್ ನ್ಯೂಸ್