ರಮಾನಾಥ ರೈಗೆ ಎಂಎಲ್ಸಿ ಮಾಡಿ ದಕ್ಷಿಣ ಕನ್ನಡದ ಉಸ್ತುವಾರಿ? ಏನಿದು ಬೆಳವಣಿಗೆ?

ಮಂಗಳೂರು: ಕರ್ನಾಟಕದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನದ ಬಳಿಕ ಸಚಿವ ಸಂಪುಟಕ್ಕೆ 8 ಮಂದಿಯನ್ನು ಮೊದಲ ಹಂತದಲ್ಲಿ ಸೇರ್ಪಡೆ ಮಾಡಲಾಗಿದೆ.ಆದರೆ ಈ ವರೆಗೆ ಖಾತೆ ಹಂಚಿಕೆ ನಡೆದಿಲ್ಲ.

ಎರಡನೇ ಹಂತದಲ್ಲಿ ಸಂಪುಟಕ್ಕೆ ಸೇರಲು ಶಾಸಕರ ದಂಡೇ ಮುಗಿಬಿದ್ದಿದೆ.ಹಿರಿತನ, ಜಾತಿ ಲೆಕ್ಕಾಚಾರ, ಜಿಲ್ಲಾವಾರು ಲೆಕ್ಕಚಾರ ಸೇರಿ ಹಲವು ಮಾನದಂಡಗಳ ಮೂಲಕ ಸಚಿವ ಸ್ಥಾನ ನೀಡಲಾಗುತ್ತಿದೆ.ಇದರಲ್ಲಿ ಈ ಬಾರಿ ಕರಾವಳಿಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಬಿಜೆಪಿಯ ಹಿಂದುತ್ವದ ಎದುರು ಕಾಂಗ್ರೆಸ್ ಕಾರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತ್ತು.ಮಂಗಳೂರು ಕ್ಷೇತ್ರದ ಖಾದರ್ ಮತ್ತು ಪುತ್ತೂರು ಕ್ಷೇತ್ರದಲ್ಲಿ ಅಶೋಕ್ ರೈ ಮಾತ್ರ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು.ಇದರಿಂದಾಗಿ ಯುಟಿ ಖಾದರ್ ಗೆ ಈ ಬಾರೀ ಸಚಿವ ಸ್ಥಾನ ಪಕ್ಕಾ, ಅವರೇ ಜಿಲ್ಲೆಯ ಉಸ್ತುವಾರಿಯಾಗುತ್ತಾರೆ ಎಂಬ ನಿರೀಕ್ಷೆ ಇತ್ತು.ಆದರೆ ಬದಲಾದ ಬೆಳವಣಿಗೆಯಲ್ಲಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಸ್ಪೀಕರ್ ಹುದ್ದೆ ನೀಡಿ ಮೌನವಾಗಿಸಿದೆ.

ಈ ಎಲ್ಲ ಬೆಳವಣಿಗೆಗಳು ಖರ್ಗೆ ಕುಟುಂಬದ ಕಾಸಾ ಮಂಜುನಾಥ್ ಭಂಡಾರಿಗೆ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಹಾದಿ ಸುಗಮಗೊಳಿಸಿದೆ ಎನ್ನಾಗಿತ್ತು.ಆದರೆ ಖರ್ಗೆ ಗುಂಪಿನ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಗುಂಪು ಬುಡಮೇಲು‌ ಮಾಡಲಿದೆಯೇ ಎಂಬ ಅನುಮಾನ‌ ಮೂಡಿದೆ.

ಸಿದ್ದರಾಮಯ್ಯ ಅವರ ಬಳಗದಲ್ಲಿ ಬಿ.ರಮಾನಾಥ ರೈ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಂಪುಟ ಸೇರಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ. ಬಂಟ ಸಮುದಾಯವನ್ನು ಕಾಂಗ್ರೆಸ್ ಪಕ್ಷದತ್ತ ಲೋಕಸಭೆ ಚುನಾವಣೆ ಹಿನ್ನೆಲೆ ಸೆಳೆಯುವ ತಂತ್ರ ಇದೆ ಎನ್ನಲಾಗಿದೆ.

ಬಂಟ್ವಾಳ ಕ್ಷೇತ್ರದಲ್ಲಿ ಸೋತಿರುವ ರಮಾನಾಥ ರೈ ಅವರು ಚುನಾವಣಾ ರಾಜಕಾರಣಕ್ಕೆ ನಿವೃತಿ ಹೇಳಿದ್ದರು.ಆದರೂ ಅವರನ್ನು ಸಕ್ರಿಯ ರಜಕಾರಣಕ್ಕೆ ತರಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com